Categories: ಕರ್ನಾಟಕ

ಚುನಾಯಿತ ಪ್ರತಿನಿಧಿಗಳ ವರ್ತನೆ ಬಗ್ಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಬೇಸರ

ಬೆಂಗಳೂರು, ; ಚುನಾಯಿತ ಪ್ರತಿನಿಧಿಗಳ ವರ್ತನೆ ಬಗ್ಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಬೇಸರ ವ್ಯಕ್ತಪಡಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಎಫ್‌ಕೆಸಿಸಿಐ ಆಯೋಜಿಸಿದ್ದ ಸರ್. ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿಯನ್ನು ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಆರ್. ಜಯರಾಂ ಅವರಿಗೆ ನೀಡಿ ಗೌರವಿಸಿದ ನಂತರ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಸಂಸತ್ ಅಧಿವೇಶನದ ಸಂದರ್ಭದಲ್ಲಿ ಕೆಲ ಸದಸ್ಯರ ಅನುಚಿತ ವರ್ತನೆಯನ್ನು ಉಲ್ಲೇಖಿಸಿ ಬೇಸರ ಹೊರ ಹಾಕಿದರು.
ರಾಜ್ಯಸಭೆ ಸೇರಿದಂತೆ ಬೇರೆ ಬೇರೆ ರಾಜ್ಯಗಳ ವಿಧಾನಸಭೆಗಳಲ್ಲು ಶಾಸಕರ ಅನುಚಿತ ವರ್ತನೆಗಳನ್ನು ಪ್ರಸ್ತಾಪಿಸಿದ ಅವರು, ಜನಪ್ರತಿನಿಧಿಗಳು ಜನರಿಗೆ ಮಾದರಿಯಾಗಿರಬೇಕು ಎಂದರು.ಜನಪ್ರತಿನಿಧಿಗಳ ನಡವಳಿಕೆ ಜನರಿಗೆ ಮಾದರಿಯಾಗಿರುವಂತೆ ಇದ್ದಾಗ ಮಾತ್ರ ಅವರು ರೋಲ್ ಮಾಡೆಲ್ ಆಗಿ ಇರುತ್ತಾರೆ. ಜನ ಮಾಧ್ಯಮಗಳಲ್ಲಿ ಜನಪ್ರತಿನಿಧಿಗಳ ವರ್ತನೆಯನ್ನು ಗಮನಿಸುತ್ತಾರೆ. ಅವರ ನಡವಳಿಕೆ ಕೆಟ್ಟದ್ದಾಗಿದ್ದಾಗ ಜನ ಅಸಹ್ಯ ಮತ್ತು ಬೇಸರ ಪಟ್ಟುಕೊಳ್ಳುತ್ತಾರೆ ಎಂದರು.
ಹಲವರು ನನ್ನನ್ನು ಯಾಕೆ ಬೇಸರದಲ್ಲಿದ್ದೀರ ಎಂದು ಕೇಳಿದರು. ಇತ್ತೀಚೆಗೆ ರಾಜ್ಯಸಭೆಯಲ್ಲಿ ನಡೆದಿದ್ದು ಬ್ಯಾಡ್, ಇದಕ್ಕೆ ನಾನು ಸ್ಯಾಡ್ ಎಂದು ಹೇಳಿದೆ ಎಂದವರು ತಮ್ಮ ಎಂದಿನ ಪ್ರಾಸಬದ್ಧ ಶೈಲಿಯಲ್ಲಿ ಹೇಳಿದರು.
ಕರ್ನಾಟಕ ಅದರಲ್ಲೂ ಬೆಂಗಳೂರಿನ ವಾತಾವರಣ ಅದ್ಭುತ ಎಲ್ಲೆಡೆ ಹಸಿರು ತಂಪು ಇದೆ. ಹಸಿರು ಬದುಕಿಗೆ ಖುಷಿ ನೀಡುತ್ತದೆ. ಬೆಂಗಳೂರಿನಲ್ಲೂ ನಾನು ಹಲವು ವರ್ಷ ಖುಷಿಯಿಂದ ಕಳೆದಿದ್ದೇನೆ. ಕರ್ನಾಟಕದ ಊಟ, ಜನ, ಮಣ್ಣು ಎಲ್ಲವೂ ತಮಗೆ ಅಚ್ಚುಮೆಚ್ಚು ಎಂದರು.

Indresh KC

Recent Posts

ಕೇಂದ್ರ ಸೂಚನೆ ನೀಡಿದ ಕೂಡಲೇ ರಾಜ್ಯದಲ್ಲಿ ಸಿಎಎ ಅನುಷ್ಠಾನ: ಮೋಹನ್‌ ಯಾದವ್‌

ದೇಶಾದ್ಯಂತ ಚುನಾವಣೆಗ ಅಂತ್ಯಗೊಳುವುದಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕ್ರಿಯೆ ಆರಂಭಿಸಬೇಕೆಂದು ಕೇಂದ್ರ ನಿರ್ಧರಿಸಿದೆ.

17 mins ago

ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಮಾನಸಿಕ ಅಸ್ವಸ್ಥ

ವ್ಯಕ್ತಿಯೊಬ್ಬ ತನ್ನ ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ  ಸೀತಾಪುರದಲ್ಲಿ ನಡೆದಿದೆ.

36 mins ago

ಕಲಬುರಗಿ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ

ಮದುವೆಗೆ ನಿರಾಕರಿಸಿದ್ದಕ್ಕೆ  ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ನಡೆದಿದೆ.

1 hour ago

ಮುಂದಿನ 6 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಮುಂದಿನ 6 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ  ನೀಡಿದೆ.

1 hour ago

ಜೈಲಿನಿಂದ ಹೊರಬಂದ ಕೇಜ್ರಿವಾಲ್​ಗೆ ಆರತಿ ಬೆಳಗಿ ಸ್ವಾಗತಿಸಿದ ಕುಟುಂಬಸ್ಥರು

ಅಕ್ರಮ ಮದ್ಯ ನೀತಿ ಪ್ರಕರಣದ ಆರೋಪದಲ್ಲಿ ಜೈಲು ಸೇರಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​​ ಅವರಿಗೆ ನಿನ್ನೆ ಸುಪ್ರೀಂ ಕೋರ್ಟ್…

2 hours ago

ಲೈಂಗಿಕ ದೌರ್ಜನ್ಯ ಆರೋಪ: ವಕೀಲ ದೇವರಾಜೇಗೌಡರನ್ನು ವಶಕ್ಕೆ ಪಡೆದ ಪೊಲೀಸರು

ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆ ವಕೀಲ ದೇವರಾಜೇಗೌಡರನ್ನು ಹಿರಿಯೂರು ಪೊಲೀಸರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗುಯಿಲಾಳ್ ಟೋಲ್ ಬಳಿ …

2 hours ago