News Karnataka Kannada
Sunday, April 28 2024
ಚಿಕ್ಕಬಳ್ಳಾಪುರ

ಕುಡಿದ ಅಮಲಿನಲ್ಲಿ ಮರದ ಮೇಲೆ ಸೆಲ್ಫಿ ವಿಡಿಯೋ ಹುಚ್ಚಾಟ: ಬೆಂಗಳೂರಿನ ಟೆಕ್ಕಿ ಸಾವು

Death 20072021
Photo Credit :

ಚಿಕ್ಕಬಳ್ಳಾಪುರ:  ಇತ್ತೀಚೆಗೆ ಯುವಕರಲ್ಲಿ ಸೆಲ್ಫಿ ಹುಚ್ಚು ಸಾಮಾನ್ಯವಾಗಿ ಕಾಣುತ್ತೇವೆ ಆದರೆ ಸೆಲ್ಫಿ ತೆಗೆಯುವ ಧಾವಂತದಲ್ಲಿ ಜೀವ ಕಳೆದುಕೊಂಡ ಘಟನೆ ಒಂದು ಬರ್ತ್​​ ಡೇ ಪಾರ್ಟಿ ಆಗಮಿಸಿದ ಬೆಂಗಳೂರು ಮೂಲದ ಟೆಕ್ಕಿ ಓರ್ವ ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡಗು ಜಲಾಶಯದ ಹಿನ್ನೀರಿನಲ್ಲಿ ಜಲಸಮಾಧಿಯಾಗಿದ್ದಾರೆ.ಮೃತಪಟ್ಟ ಯುವಕ ಬೆಂಗಳೂರಿನ ಸುಂಕದಕಟ್ಟೆಯ ನಿವಾಸಿ ರೋಹಿತ್ (24) ಎಂದು ಗುರುತಿಸಲಾಗಿದೆ.ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ರೋಹಿತ್ ಚಿಕ್ಕಬಳ್ಳಾಪುರದಲ್ಲಿರುವ ಸ್ನೇಹಿತ ಸಂತೋಷನ ಬರ್ತ್​​ ಡೇ ಪಾರ್ಟಿ ಆಚರಣೆಗೆ ಐವರು ಸ್ನೇಹಿತರೊಂದಿಗೆ ಜಕ್ಕಲಮಡಗು ಜಲಾಶಯಕ್ಕೆ ಬಂದಿದ್ದರು. ಈಜು ಬಾರದಿದ್ದರೂ ನೀರಿಗೆ ಇಳಿದಿದ್ದ ಸ್ನೇಹಿತರು, ಜಲಾಶಯದ ಹಿನ್ನೀರಿನಲ್ಲಿರುವ ಮರದ ಮೇಲೆ ಹತ್ತಿ ಸೆಲ್ಫಿ ಫೋಟೋ-ವಿಡಿಯೋ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಕೆಳಗೆಬಿದ್ದ ರೋಹಿತ್ ನೀರಿನಲ್ಲಿ ಮುುಳುಗಿ ಸಾವನ್ನಪ್ಪಿದ್ದಾರೆ.ಕುಡಿದ ಅಮಲಿನಲ್ಲಿ ಮರದ ಮೇಲೆ ಹತ್ತಿದ ರೋಹಿತ್ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ ಎಂದು ನಂದಿಗಿರಿಧಾಮ ಠಾಣೆ ಪೊಲೀಸರು ತಿಳಿಸಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿ, ರೋಹಿತನ ಶವವನ್ನು ನೀರಿಂದ ಹೊರಗೆ ತೆಗೆದಿದ್ದಾರೆ. ಸ್ಥಳದಲ್ಲಿ ಮೃತನ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಜೊತೆಗಿದ್ದ ಸ್ನೇಹಿತರ ವಿರುದ್ಧವೂ ಪೋಷಕರು ಆಕ್ರೋಶಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು