ಕಾಸರಗೋಡು: ಜಿಲ್ಲೆಯಲ್ಲಿ 270 ಮಂದಿಗೆ ಬುಧವಾರ ಕೊರೋನಾ ಸೋಂಕು ದೃಢಪಟ್ಟಿದ್ದು, 242 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. 144 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಈಸ್ಟ್ ಎಳೇರಿ 14, ಚೆಂಗಳ, ಬದಿಯಡ್ಕ ತಲಾ 8, ಮಧೂರು 13, ವೆಸ್ಟ್ ಎಳೇರಿ ಮೀಂಜ, ಪೈವಳಿಕೆ ತಲಾ 1, ಕಾಞಂಗಾಡ್ 21, ನೀಲೇಶ್ವರ, ಮಡಿಕೈ ತಲಾ 10, ಕಯ್ಯೂ ರು ಚಿಮೇನಿ, ಚೆಮ್ನಾಡ್ ತಲಾ 12, ಚೆರ್ವತ್ತೂರು, ಬದಿಯಡ್ಕ ತಲಾ 8, ಕೊಡೋ ಬೇಳೂರು, ಪುಲ್ಲೂರು ಪೆರಿಯ, ತಲಾ 7, ಪಳ್ಳಿಕೆರೆ 19, ಉದುಮ 24, ಅಜಾನೂರು 17, ಎಣ್ಮಕಜೆ 3, ಕುಂಬಳೆ 9, ಮುಳಿಯಾರು, ಕಿನಾನೂರು ಕರಿಂದಲ ತಲಾ 3, ಮಂಜೇಶ್ವರ 9, ದೇಲಂಪಾಡಿ 4, ಮೊಗ್ರಾಲ್ ಪುತ್ತೂರು, ಕಾರಡ್ಕ, ತ್ರಿಕ್ಕರಿಪುರ ತಲಾ 2, ಕಾಸರಗೋಡು 16, ಕುತ್ತಿಕೋಲು 6, ಮಂಗಲ್ಪಾಡಿ, ಬೇಡಡ್ಕ ತಲಾ 6 ಮಂದಿಗೆ ಸೋಂಕು ದೃಢಪಟ್ಟಿದೆ.
ಇದುವರೆಗೆ 6678 ಮಂದಿಗೆ ಸೋಂಕು ದೃಢಪಟ್ಟಿದೆ. 4642 ಮಂದಿ ಗುಣಮುಖರಾಗಿದ್ದಾರೆ. 46 ಮಂದಿ ಮೃತಪಟ್ಟಿದ್ದಾರೆ. 6214 ಮಂದಿ ನಿಗಾದಲ್ಲಿದ್ದು, ಪೈಕಿ 1347 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.