News Karnataka Kannada
Tuesday, May 07 2024
ಕರ್ನಾಟಕ

ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 9 ಮಂದಿಗೆ ಕೋವಿಡ್ ಪಾಸಿಟಿವ್

Photo Credit :

ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 9 ಮಂದಿಗೆ ಕೋವಿಡ್ ಪಾಸಿಟಿವ್

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 9 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 8 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಸೋಂಕು ಖಚಿತಗೊಂಡವರಲ್ಲಿ 8 ಮಂದಿ ವಿದೇಶಗಳಿಂದ ಆಮಿಸಿದವರು, ಒಬ್ಬಾತ ಮಹಾರಾಷ್ಟ್ರದಿಂದ ಬಂದವರು. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 6ಮಂದಿಗೆ, ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಸೆಂಟರ್ ನಲ್ಲಿ ದಾಖಲಾಗಿದ್ದ ಒಬ್ಬರಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.

ಕುವೈತ್ ನಿಂದ ಬಂದಿದ್ದ ತ್ರಿಕರಿಪುರ ಗ್ರಾಮಪಂಚಾಯತ್ ನಿವಾಸಿ 43 ವರ್ಷದ ವ್ಯಕ್ತಿ, ವಲಿಯಪರಂಬ ಪಂಚಾಯತ್ ನಿವಾಸಿ 23, 48 ವರ್ಷದ ನಿವಾಸಿ, ಕಾಞಂಗಾಡ್ ನಗರಸಭೆ ವ್ಯಾಪ್ತಿಯ ನಿವಾಸಿ 43 ವರ್ಷದ ವ್ಯಕ್ತಿ, ಕುಂಬಳೆ ಗ್ರಾಮಪಂಚಾಯತ್ ನಿವಾಸಿ 28 ವರ್ಷದ ವ್ಯಕ್ತಿ, ಖತಾರ್ ನಿಂದ ಆಗಮಿಸಿದ್ದ ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತ್ ನಿವಾಸಿ 44 ವರ್ಷದ ವ್ಯಕ್ತಿ, ಒಮಾನ್ ನಿಂದ ಬಂದಿದ್ದ ವಲಿಯಪರಂಬ ಪಂಚಾಯತ್ ನಿವಾಸಿ 60 ವರ್ಷದ ನಿವಾಸಿ, ದುಬಾಯಿಯಿಂದ ಆಗಮಿಸಿದ್ದ ಮಡಿಕೈ ಪಂಚಾಯತ್ ನಿವಾಸಿ 30 ವರ್ಷದ ವ್ಯಕ್ತಿಗೆ ಮತ್ತು ಮಹಾರಾಷ್ಟ್ರ ದಿಂದ ಬಂದಿದ್ದ ತ್ರಿಕರಿಪುರ ಗ್ರಾಮಪಂಚಾಯತ್ ನಿವಾಸಿ 60 ವರ್ಷದ ವ್ಯಕ್ತಿಗೆ ಸೋಂಕು ಖಚಿತವಾಗಿದೆ.

ಕಾಸರಗೋಡು ಉಕ್ಕಿನಡ್ಕ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರ ದಿಂದ ಬಂದಿದ್ದ ಕುಂಬಳೆ ಗ್ರಾಮಪಂಚಾಯತ್ ನಿವಾಸಿ 49 ವರ್ಷದ ವ್ಯಕ್ತಿ, ಮಂಗಲ್ಪಾಡಿ ಗ್ರಾಮಪಂಚಾಯತ್ ನಿವಾಸಿ 46 ವರ್ಷದ ವ್ಯಕ್ತಿ, ಕುವೈತ್ ನಿಂದ ಆಗಮಿಸಿದ್ದ ಕುಂಬಳೆ ಗ್ರಾಮಪಂಚಾಯತ್ ನಿವಾಸಿ 63 ವರ್ಷದ ನಿವಾಸಿ, ಯು.ಎ.ಇ.ಯಿಂದ ಬಂದಿದ್ದ ಚೆಮ್ನಾಡ್ ಗ್ರಾಮಪಂಚಾಯತ್ ನಿವಾಸಿ 49 ವರ್ಷದ ವ್ಯಕ್ತಿ, ಪಳ್ಳಿಕ್ಕರೆ ನಿವಾಸಿ 56, 51 ವರ್ಷದ ನಿವಾಸಿಗಳು, ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಸೆಂಟರ್ ನಲ್ಲಿ ದಾಖಲಾಗಿದ್ದ, ಕುವೈತ್ ನಿಂದ ಆಗಮಿಸಿದ್ದ ನೀಲೇಶ್ವರ ನಗರಸಭೆ ವ್ಯಾಪ್ತಿಯ 41 ವರ್ಷದ ನಿವಾಸಿಗೆ ಕೋವಿಡ್ ನೆಗೆಟಿವ್ ಆಗಿದೆ.

ಜಿಲ್ಲೆಯಲ್ಲಿ 4899 ಮಂದಿ ನಿಗಾದಲ್ಲಿದ್ದಾರೆ. 4519 ಮಂದಿ ಮನೆಗಳಲ್ಲಿ, 380 ಮಂದಿ ಸಾಂಸ್ಥಿಕ ನಿಗಾದಲ್ಲಿದ್ದಾರೆ. ನೂತನವಾಗಿ ಸೋಮವಾರ 25 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 174 ಮಂದಿಯ ಫಲಿತಾಂಶ ಇನ್ನೂ ಲಭಿಸಿಲ್ಲ. 156 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು