ದುಬೈ: ಬಂಟ್ಸ್‌ ಫ್ಯಾಮಿಲಿ ಯು.ಎ.ಇ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಇದೇ ಅಕ್ಟೋಬರ್‌ 06 ರಂದು ಆದಿತ್ಯವಾರದಂದು ನಡೆಯಲಿದೆ.

ಸಂಜೆ 4 ಗಂಟೆಯಿಂದ 7;30 ರ ವರೆಗೆ ಈ ಪೂಜೆಯನ್ನು ಜೆಎಸ್‌ ಎಸ್‌ ಪ್ರೈವೆಟ್‌ ಸ್ಕೂಲ್‌ ಎಎಲ್‌ ಸಫಾ ದುಬೈ ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಸಂಜೆ ಮುಹೂರ್ತ 4 ಗಂಟೆಗೆ ಸಂಕಲ್ಪ, ಕಲಶ ಪ್ರತಿಷ್ಠಾಪನೆ, ಪೂಜಾ ವಿಧಿ ವಿಧಾನ ಪ್ರಾರಂಭಗೊಂಡು ಸತ್ಯನಾರಾಯಣ ಕಥಾಸಾರ, ರಾತ್ರಿ 7; 30 ಗಂಟೆಗೆ ಮಹಾಪೂಜೆ , ಮಹಾ ಮಂಗಳಾರತಿ ಬಳಿಕ ಮಹಾಪ್ರಸಾದ ವಿನಿಯೋಗ ಆಗಲಿದೆ. ಇನ್ನು ಶ್ರೀ ರಾಜಾರಾಜೇಶ್ವರಿ ಭಜನಾ ಮಂಡಳಿ ಯುಎಇ ಇವರಿಂದ ಭಜನಾ ಸಂಗೀತ ನೆರವೇರಲಿದೆ.
Whatsapp Image 2024 09 06 At 10.27.27 Am (1)

ಈ ಪೂಜಾ ಕೈಂಕರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುವಂತೆ ಬಂಟ್ಸ್‌ ಫ್ಯಾಮಿಲಿ ಯು. ಎ. ಇ ತಿಳಿಸಿದೆ.