ರಾಜಸ್ಥಾನ: ಜೈಪುರದಲ್ಲಿ ಸಣ್ಣ ಅಪಘಾತವೊಂದು ವಿಕೋಪಕ್ಕೆ ತಿರುಗಿದ್ದು, ಯುವತಿ ರಸ್ತೆಯಲ್ಲೇ ಬೈಕ್ ಸವಾರನ ವಾಹನವನ್ನು ಜಖಂಗೊಳಿಸಿರುವ ಘಟನೆ ನಡೆದಿದೆ.

ಸಣ್ಣ ಮಟ್ಟದ ಡಿಕ್ಕಿಯಾದ ಬೆನ್ನಲ್ಲೇ ಆಕ್ರೋಶಗೊಂಡ ಮಹಿಳೆ, ಬೈಕ್ ಸವಾರನ ಜೊತೆ ಗಲಾಟೆ ಮಾಡಿದ್ದಲ್ಲದೆ, ಆತನ ಬೈಕ್‌ನ ಭಾಗಗಳನ್ನು ಮುರಿದು ಹಾಕಿದ್ದಾರೆ. ಈ ವೇಳೆ ಸ್ಥಳೀಯರು ತಡೆಯಲು ಪ್ರಯತ್ನಿಸಿದರೂ ಮಹಿಳೆ ಸುಮ್ಮನಾಗಲಿಲ್ಲ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಜೈಪುರ ಪೊಲೀಸರ ವಿಳಂಬ ಪ್ರತಿಕ್ರಿಯೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

View this post on Instagram

A post shared by News Karnataka (@newskarnataka)