ನವದೆಹಲಿ: 2017ರ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ‘ಲವ್ ಜಿಹಾದ್’ ಅನ್ನು ಚುನಾವಣಾ ವಿಷಯವಾಗಿಸಿತ್ತು. ಇದನ್ನು ನಿಲ್ಲಿಸಲು, ಸರ್ಕಾರವು 2020ರಲ್ಲಿ ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಪರಿವರ್ತನೆಯ ನಿಷೇಧದ ಸುಗ್ರೀವಾಜ್ಞೆಯನ್ನು ಅಂಗೀಕರಿಸಿತು. 2021ರಲ್ಲಿ ಶಾಸಕಾಂಗವು ಅದನ್ನು ಅಂಗೀಕರಿಸುವ ಮೂಲಕ ಅದಕ್ಕೆ ಕಾನೂನು ರೂಪವನ್ನು ನೀಡಿತು. ನಂತರ ಈ ಕಾನೂನಿನ ಅಡಿಯಲ್ಲಿ ಗರಿಷ್ಠ ಶಿಕ್ಷೆ 10 ವರ್ಷಗಳು ಮತ್ತು 50 ಸಾವಿರದವರೆಗೆ ದಂಡ ವಿಧಿಸಲಾಗುತ್ತಿತ್ತು. ಈ ಹೊಸ ಮಸೂದೆಯು ಅಪರಾಧದ ವ್ಯಾಪ್ತಿ ಮತ್ತು ಶಿಕ್ಷೆ ಎರಡನ್ನೂ ಹೆಚ್ಚಿಸಲು ಪ್ರಸ್ತಾಪಿಸುತ್ತದೆ.
ತಿದ್ದುಪಡಿಯ ಪ್ರಕಾರ, ಈ ಹಿಂದೆ ಹೊಸ ಮಸೂದೆಯಲ್ಲಿ ವ್ಯಾಖ್ಯಾನಿಸಲಾದ ಅಪರಾಧಗಳಿಗೆ ಶಿಕ್ಷೆಯನ್ನು ದ್ವಿಗುಣಗೊಳಿಸಲಾಗಿದೆ. ಈ ಮಸೂದೆಯು ಈಗ “ಲವ್ ಜಿಹಾದ್”ನ ವಿಶಾಲವಾದ ವ್ಯಾಖ್ಯಾನವನ್ನು ಒಳಗೊಂಡಿದೆ. ಇದರ ಪ್ರಕಾರ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗುತ್ತದೆ. ಈ ತಿದ್ದುಪಡಿ ಮಸೂದೆಯನ್ನು ಆಗಸ್ಟ್ 2ರಂದು ಧ್ವನಿ ಮತದ ಮೂಲಕ ವಿಧಾನಸಭೆಯಲ್ಲಿ ಅಂಗೀಕರಿಸುವ ನಿರೀಕ್ಷೆಯಿದೆ.
ಲವ್ ಜಿಹಾದ್ ತ್ಯಜಿಸಿ ಅಥವಾ ರಾಮ ನಾಮ ಸತ್ಯಕ್ಕೆ ಸಿದ್ಧರಾಗಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನಸಭಾ ಅಧಿವೇಶನದಲ್ಲಿ ಹೇಳಿದ್ದಾರೆ. ಯುಪಿ ಕಾನೂನುಬಾಹಿರ ಮತಾಂತರ ನಿಷೇಧ (ತಿದ್ದುಪಡಿ) ಮಸೂದೆಯನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ಇಂದು (ಜುಲೈ.೩೦) ಇದು ಅಂಗೀಕಾರವಾಗಿದೆ.

