ನವದೆಹಲಿ : ಎಲಾನ್ ಮಸ್ಕ್ ಒಡೆತನದ ಪಾಪುಲರ್ ಸೋಷಿಯಲ್ ಮೀಡಿಯಾ ‘X’ ಜಾಗತಿಕವಾಗಿ ದಿಢೀರ್ ಸರ್ವರ್ ಡೌನ್ ಆಗಿದೆ.
ಈ ಕುರಿತು ಟ್ರ್ಯಾಕಿಂಗ್ ಸೈಟ್ Downdetector.com ವರದಿ ಮಾಡಿದ್ದು, ಆದರೆ ಈ ಬೆಳವಣಿಗೆಗೆ ನಿಖರ ಕಾರಣ ಏನೆಂಬುವುದು ಸದ್ಯಕ್ಕೆ ಬಹಿರಂಗಪಡಿಸಿಲ್ಲ. ಸಡನ್ ಆಗಿ ಸರ್ವರ್ ಡೌನ್ ಆದ ಪರಿಣಾಮ ಅನೇಕ ಬಳಕೆದಾರರು ಪರದಾಡುವಂತಾಯಿತು.
ಭಾರತ ಮಾತ್ರವಲ್ಲ, ಅಮೆರಿಕ, ಬ್ರಿಟನ್, ಕೆನಾಡ ಮುಂತಾದ ದೇಶಗಲ್ಲಿ ಈ ಸಮಸ್ಯೆ ಎದುರಾಗಿದೆ. ಡೌನ್ಡಿಟೆಕ್ಟರ್ ನೀಡಿರುವ ಮಾಹಿತಿ ಪ್ರಕಾರ, ಅಂದಾಜು ಶೇ.80 ಜನ ‘X’ನ ಅಧಿಕೃತ ಜಾಲತಾಣಕ್ಕೆ ತಮ್ಮ ಸಮಸ್ಯೆಗಳ ದೂರುಗಳನ್ನು ವರದಿ ಮಾಡಿದ್ದಾಗಿ ತಿಳಿದುಬಂದಿದೆ.

