ತಮಿಳುನಾಡು : ಚೆನ್ನೈನಲ್ಲಿ ಕಾರ್ಪೊರೇಷನ್ ಸ್ವಚ್ಛತಾ ಕಾರ್ಯಕರ್ತೆ ಆಗಿರುವ ಎಸ್. ಪದ್ಮಾ ಅವರು ತಮಗೆ ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ಪೊಲೀಸರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಟಿ ನಗರದ ಬಳಿ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದ ಆಭರಣ ವ್ಯಾಪಾರಿಯೊಬ್ಬರು ತಮ್ಮ ಬ್ಯಾಗ್ ಅನ್ನು ತಳ್ಳುವ ಬಂಡಿಯ ಮೇಲೆ ಬಿಟ್ಟು ಹೊರಟುಹೋಗಿದ್ದರು.
ಈ ಆಭರಣಗಳಿದ್ದ ಬ್ಯಾಗ್ ಸ್ವಚ್ಛತಾ ಕಾರ್ಯಕರ್ತೆ ಪದ್ಮಾ ಅವರ ಕೈಗೆ ಸಿಕ್ಕಿದೆ. ಆದ್ರೆ ಒಂದು ಗುಲಗಂಜಿಯಷ್ಟು ಚಿನ್ನಕ್ಕೂ ಆಸೆ ಪಡದ ಮಹಿಳೆ ಆಭರಣಗಳನ್ನು ಪಾಂಡಿ ಬಜಾರ್ ಪೊಲೀಸರಿಗೆ ಒಪ್ಪಿಸಿದ್ದಾರೆ.

