ತೆಲಂಗಾಣ: ಗನ್‌ಪಾಯಿಂಟ್‌ನಲ್ಲಿ ಮಹಿಳಾ ಕಾನ್‌ಸ್ಟೆಬಲ್ ಮೇಲೆ ಪೊಲೀಸರೇ ಅತ್ಯಾಚಾರವೆಸಗಿರುವ ಘಟನೆ ಭೂಪಾಲಪಲ್ಲಿಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಅತ್ಯಾಚಾರವೆಸಗಿದ ಪೊಲೀಸರನ್ನು ಸೇವೆಯಿಂದ ತೆಗೆದುಹಾಕಲಾಗಿದೆ. ಕಾಳೇಶ್ವರಂ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಭವಾನಿ ಸೇನ್, ಜಯಶಂಕರ್ ಎಂಬವರು ಮಹಿಳಾ ಕಾನ್‌ಸ್ಟೆಬಲ್ ಮೇಲೆ ಅತ್ಯಾಚಾರವೆಸಗಿದ್ದರು. ಬಂದೂಕು ತೋರಿಸಿ ಕ್ರೌರ್ಯ ಮೆರೆದಿದ್ದರು.
ಅತ್ಯಾಚಾರವೆಸಗಿದ ಆರೋಪದಲ್ಲಿ ಪೊಲೀಸರನ್ನು ಬಂಧಿಸಿ 14 ದಿನಗಳ ಕಾಲ ರಿಮಾಂಡ್ಗೆ ನೀಡಲಾಗಿದೆ. ಈ ಹಿಂದೆಯೂ ಎಸ್‌ಐ ತನ್ನ ಹುದ್ದೆಯ ಲಾಭ ಪಡೆದು ಮೂವರು ಮಹಿಳಾ ಕಾನ್‌ಸ್ಟೆಬಲ್‌ಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂಬ ಆರೋಪ ಇದ್ದು ಪ್ರಕರಣ ಕೂಡ ದಾಖಲಿಸಲಾಗಿತ್ತು.

