ನವದೆಹಲಿ: ಡ್ಯಾನಿಶ್ ಔಷಧ ತಯಾರಕ ಕಂಪೆನಿ ನೊವೊ ನಾರ್ಡಿಸ್ಕ್ ತನ್ನ ತೂಕ ಇಳಿಸುವ ಔಷಧಿಯನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ.
ಈ ತೂಕ ಇಳಿಸುವ ಔಷಧ ವೆಗೊವಿ ಹಸಿವು ಮತ್ತು ಆಹಾರ ಸೇವನೆಯನ್ನು ನಿಯಂತ್ರಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಬೊಜ್ಜು ಇರುವ ಜನರಿಗೆ ತೂಕ ನಿರ್ವಹಣೆ ಮಾಡಲು ಹಾಗೂ ಹೃದಯಕ್ಕೆ ಸಂಬಂಧಿಸಿದ ಅಪಾಯಗಳನ್ನ ಕಡಿಮೆ ಮಾಡಲು ಒಪ್ಪಿಗೆ ನೀಡಲಾದ ಭಾರತದ ಮೊದಲ ಔಷಧಿ ಇದಾಗಿದೆ.
ವೆಗೊವಿ ಔಷಧಿಯು 0.25 ಮಿಗ್ರಾಂ, 0.5 ಮಿಗ್ರಾಂ, 1 ಮಿಗ್ರಾಂ, 1.7 ಮಿಗ್ರಾಂ ಮತ್ತು 2.4 ಮಿಗ್ರಾಂ ಡೋಸ್ಗಳಲ್ಲಿ ಲಭ್ಯವಿದೆ. ಮೊದಲ ಮೂರು ಡೋಸ್ಗ್‌ಗಳ ಬೆಲೆ 4,336 ರೂಪಾಯಿಗಳು, ತಿಂಗಳಿಗೆ 17,345 ರೂಪಾಯಿ. ವೆಗೊವಿ ಗ್ಲುಕಗಾನ್-ತರಹದ ಪೆಪ್ಟೈಡ್ 1, ಅಥವಾ ಜಿಎಲ್ಪಿ -1 ಎಂದು ಕರೆಯಲ್ಪಡುವ ನೈಸರ್ಗಿಕ ಹಾರ್ಮೋನ್ಗಳ ಜೊತೆ ಕೆಲಸ ಮಾಡುತ್ತದೆ. ಅದರ ಜೊತೆಗೆ ಇದು ಹಸಿವು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಈ ಔಷಧಿಯ ಕಾರಣದಿಂದ ಹೊಟ್ಟೆ ಉಬ್ಬರ ಮತ್ತು ಹೊಟ್ಟೆನೋವು ಕಾಣಿಸಬಹುದು, ಹಾಗೆಯೇ, ಬರ್ಪಿಂಗ್, ಅತಿಸಾರ, ತಲೆತಿರುಗುವಿಕೆ, ಎದೆಯುರಿ ಮತ್ತು ಅಜೀರ್ಣ, ಆಯಾಸ ಮತ್ತು ದಣಿವು ಹಾಗೂ ಮಲಬದ್ಧತೆ ಸಹ ಉಂಟಾಗಬಹುದು.
ಕೆಲವರಿಗೆ ಈ ಔಷಧಿ ಹೆಚ್ಚು ಸೂಟ್ ಆಗದಿದ್ದರೆ ಸ್ವಲ್ಪ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಬರುತ್ತದೆ. ಅವರಲ್ಲಿ ಪಿತ್ತ ಕೋಶದ ಕಲ್ಲು ಉಂಟಾಗಬಹುದು. ಇದರ ಜೊತೆಗೆ ಉರಿಯೂತ, ಹೃದಯ ಬಡಿತ ಹೆಚ್ಚಾಳವಾಗಬಹುದು, ಸಕ್ಕರೆ ಮಟ್ಟ ಕಡಿಮೆ ಆಗುವುದು, ಪ್ಯಾಂಕ್ರಿಯಾಟೈಟಿಸ್, ಮೂತ್ರಪಿಂಡದ ಸಮಸ್ಯೆಗಳು ಸಹ ಖಾಡಬಹುದು. ಹಾಗಾಗಿ ಇದನ್ನ ತೆಗೆದುಕೊಳ್ಳುವಾಗ ಸರಿಯಾದ ಮಾಹಿತಿಯನ್ನ ಪಡೆದುಕೊಳ್ಳಬೇಕು.

