ಆಂಧ್ರಪ್ರದೇಶ: ಲೋಕಸಭೆ ಚುನಾವಣೆಯಲ್ಲಿ ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಮೊದಲ ಗೆಲುವು ಕಂಡಿದ್ದು, ಎನ್ಡಿಎ ಜೊತೆ ಸೇರಿ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಗೆಲುವಿನ ಬಳಿಕ ಪವನ್ ಕಲ್ಯಾಣ್ ಎನ್ಡಿಎ ಮೈತ್ರಿ ತೊರೆಯುವ ಮಾತೇ ಇಲ್ಲ ಎಂದಿದ್ದಾರೆ.
ಖಾಸಗಿ ಸುದ್ದಿವಾಣಿ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪವನ್ ಕಲ್ಯಾಣ್, ‘ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆದಿಲ್ಲ. ನಾವು ಎನ್ಡಿಎ ಜೊತೆ ಸಂಪೂರ್ಣವಾಗಿ ಕಮಿಟ್ ಆಗಿದ್ದೇವೆ. ಎರಡನೇ ಆಲೋಚನೆಯೇ ಇಲ್ಲ’ಎಂದಿದ್ದಾರೆ.
‘ಇದು ಐತಿಹಾಸಿಕ ತೀರ್ಪಿನ ದಿನ. ನಾವು ಆಂಧ್ರಪ್ರದೇಶದ ಜನರಿಗೆ ಜವಾಬ್ದಾರಿಯುತ ಸರ್ಕಾರ ನೀಡಲು ಬದ್ಧರಾಗಿದ್ದೇವೆ. ಎನ್ಡಿಎ ಸರ್ಕಾರ ಅದನ್ನು ಗೌರವಿಸುತ್ತದೆ’ ಎಂದು ಪವನ್ ಕಲ್ಯಾಣ್ ಅವರು ಸಾರ್ವಜನಿಕವಾಗಿ ಹೇಳಿದ್ದಾರೆ.
ಪೀಠಾಪುರಂ ಕ್ಷೇತ್ರದಿಂದ ಸ್ಪರ್ಧಿಸಿ ಅವರು ದೊಡ್ಡ ಗೆಲುವು ಕಂಡಿದ್ದಾರೆ.

