ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ನಡೆದ ದುರಂತಗಳ ಸರಮಾಲೆ ಈಗ ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಹತ್ತಾರು ಸಂಕಷ್ಟಗಳನ್ನು ತಂದೊಡ್ಡಿದೆ. ಸಾವಿನ ಸುಳಿಯಲ್ಲಿ ಸಿಲುಕಿರುವ ನೂರಾರು ಜನರನ್ನು ರಕ್ಷಿಸಲು ಅಂತ ಎನ್ಡಿಆರ್ಎಫ್ ತಂಡ ಈಗಾಗಲೇ ವಯನಾಡ್ಗೆ ಆಗಮಿಸಿದೆ.
ಅವರ ಒಂದೊಂದು ಸಾಹಸವೂ ಕೂಡ ಮೈಜುಮ್ಮೆನ್ನಿಸುವಂತಿವೆ. ಯಾವ ಸಿನಿಮಾ ಹೀರೋಗಳಿಗೆ ಇವರು ಕಡಿಮೆ ಇಲ್ಲದ ಸಾಹಸಗಳಿಂದ ಜನರ ಪ್ರಾಣ, ಆಸ್ತಿ ರಕ್ಷಿಸುತ್ತಿದ್ದಾರೆ. ಇಡೀ ದೇಶವೇ ಈಗ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದೆ.
ಯಮವೇಗದಲ್ಲಿ ಹರಿಯುತ್ತಿರುವ ನೀರಲ್ಲಿ ಹಗ್ಗ ಕಟ್ಟಿಕೊಂಡು ಇಳಿಯುವುದು, ಒಂದು ಬದಿಯಿಂದ ಮತ್ತೊಂದು ಬದಿಗೆ ಹಗ್ಗದ ಸಹಾಯದಿಂದಲೇ ಜಾರಿಕೊಂಡು ಹೋಗುವಂತ ಸಾಹಸಗಳನ್ನು ಮಾಡಿ ಜನರನ್ನು ರಕ್ಷಿಸುತ್ತಿದ್ದಾರೆ.
ಆ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ಡಿಆರ್ಎಫ್ ತಂಡ ತನ್ನನ್ನು ತಾನು ತೊಡಗಿಸಿಕೊಂಡಿದೆ. ತಮ್ಮ ಜೀವದ ಹಂಗನ್ನು ತೊರೆದು, ಸಾರ್ವಜನಿಕರ ಜೀವಕ್ಕಾಗಿ ಹೋರಾಡುತ್ತಿದ್ದಾರೆ ಅಂತಹ ಹಲವು ದೃಶ್ಯಗಳು ರೋಮಾಂಚನಕಾರಿಯಾಗಿವೆ.

