Bengaluru 24°C
Ad

ಏಕಾಏಕಿ ಕುಸಿದ ನೀರಿನ ಟ್ಯಾಂಕ್‌ : ಇಬ್ಬರು ಸಾವು , 12 ಮಂದಿ ಗಂಭೀರ

ಬರೋಬ್ಬರಿ 2.5 ಲಕ್ಷ ಲೀಟರ್‌ ನೀರಿನ ಟ್ಯಾಂಕ್‌ ಕುಸಿದು ಬಿದ್ದಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದು, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ.

ಮಥುರಾ: ಬರೋಬ್ಬರಿ 2.5 ಲಕ್ಷ ಲೀಟರ್‌ ನೀರಿನ ಟ್ಯಾಂಕ್‌ ಕುಸಿದು ಬಿದ್ದಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದು, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ.

Ad
300x250 2

ಅವಶೇಷದಡಿಯಲ್ಲಿ ಅನೇಕ ಮನೆಗಳು ಸಿಲುಕಿಕೊಂಡಿವೆ. ಯುಪಿ ಆವಾಸ್‌ ವಿಕಾಸ್‌ ಪರಿಷತ್‌ ಅಭಿವೃದ್ಧಿಪಡಿಸಿರುವ ಕೃಷ್ಣ ವಿಹಾರ್‌ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಹತ್ತಿರ ಮನೆಗಳಿಗೆ ಭೀಕರ ಹಾನಿಯಾಗಿದೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. 12 ಮಂದಿಯನ್ನು ಅವಶೇಷದಡಿಯಿಂದ ಹೊರಗೆಳೆದಿದ್ದು, ಅವರ ಸ್ಥಿತಿ ಬಹಳ ಗಂಭೀರವಾಗಿದೆ. ಸ್ಥಳದಲ್ಲಿ ಅಗ್ನಿ ಶಾಮಕ ದಳ, ಪೊಲೀಸರು, ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

 

 

Ad
Ad
Nk Channel Final 21 09 2023
Ad