ಜೈಪುರ: ಬಿಡದೆ ಸುರಿಯುತ್ತಿರುವ ಮಳೆಗೆ ಎಲ್ಲೆಡೆ ಅವಾಂತರ ಸೃಷ್ಟಿಸಿದೆ. ಇದೀಗ ಜೈಪುರದಲ್ಲೂ ದುರಂತ ಸಂಭವಿಸಿದ್ದು 3 ವರ್ಷದ ಬಾಲಕಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಮನೆಯ ನೆಲಮಾಳಿಗೆಯಲ್ಲಿ ನೀರು ತುಂಬಿ ಮೃತಪಟ್ಟವರನ್ನು ಪೂರ್ವಿ (3), ಪೂಜಾ (19), ಮತ್ತು ಕಮಲ್ (24) ಎಂದು ಗುರುತಿಸಲಾಗಿದೆ. ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಭಾರೀ ಮಳೆಯಿಂದಾಗಿ ಜೈಪುರದ ಮನೆಯೊಂದರ ನೆಲಮಾಳಿಗೆಯು ಇಂದು ಜಲಾವೃತಗೊಂಡಿದ್ದು, ಮೂವರು ಸಾವನ್ನಪ್ಪಿದ್ದಾರೆ ಹಾಗೂ ಮಳೆಯ ಪರಿಣಾಮವಾಗಿ ನಾಲ್ವರು ನಾಪತ್ತೆಯಾಗಿದ್ದಾರೆ.
ಸದ್ಯ ಗಂಟೆಗಳ ಕಾರ್ಯಚರಣೆ ನಂತರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಜೈಪುರದಲ್ಲಿ ಮಳೆಯಿಂದಾಗಿ ನೆಲಮಾಳಿಗೆಯು ಜಲಾವೃತವಾಗಿತ್ತು. ಸಂತ್ರಸ್ತರು ಸಕಾಲದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ದುರಂತವಾಗಿ ಮಳೆಯ ನೀರಿನಲ್ಲಿ ಮುಳುಗಿದ್ದಾರೆ.

