ಮುಂಬೈ: ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿರಾಟ್ ಕೊಹ್ಲಿ ನೆರೆದಿದ್ದ ಪಾಪರಾಜಿಗಳು ಹಾಗು ಸುದ್ದಿಗಾರರಿಗೆ ಉಡುಗೊರೆ ನೀಡಿ ತಮ್ಮ ಖಾಸಗಿತನವನ್ನು ಗೌರವಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.
ಕಳೆದ ಫೆಬ್ರವರಿ 15 ರಂದು ಎರಡನೆ ಮಗು ವಿರಾಟ್-ಅನುಷ್ಕಾ ದಂಪತಿಯ ಮಡಿಲು ತುಂಬಿದಾಗ ಅದರ ಫೋಟೋ ಅಥವ ವಿಡಿಯೋ ಮಾಡದಂತೆ ಪಾಪರಾಜಿಗಳಲ್ಲಿ ಮನವಿ ಮಾಡಿದ್ದರು. ಅದರಂತೆ ನಡೆದುಕೊಂಡ ಪಾಪರಾಜಿಗಳು ಮಗುವಿನೊಂದಿಗೆ ಭಾರತಕ್ಕೆ ಮರಳಿದ ದಂಪತಿಯ ಖಾಸಗಿತನಕ್ಕೆ ಧಕ್ಕೆಯನ್ನುಂಟುಮಾಡಿರಲಿಲ್ಲ. ಇದಕ್ಕಾಗಿ ವಿರಾಟ್ ಕೊಹ್ಲಿ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳು ಹಾಗು ಸುದ್ದಿಗಾರರಿಗೆ ಉಡುಗೊರೆ ವಿತರಿಸಿ ಧನ್ಯವಾದ ಸಲ್ಲಿಸಿದ್ದಾರೆ ಹಾಗು ಈ ಯೋಚನೆ ಪತ್ನಿ ಅನುಷ್ಕಾಳದ್ದು ಎಂದಿದ್ದಾರೆ.
ಟಿ20 ವಿಶ್ವಕಪ್ ತಂಡದ ಎಲ್ಲಾ ಆಟಗಾರರು ಮತ್ತು ನಾಲ್ವರು ಮೀಸಲು ಆಟಗಾರರು ಈಗಾಗಲೇ ನ್ಯೂಯಾರ್ಕ್ ತಲುಪಿದ್ದು, ಇದೀಗ ವಿರಾಟ್ ಅವರನ್ನು ಸೇರಿಕೊಳ್ಳಲಿದ್ದಾರೆ.

