ಢಾಕಾ: ಬಾಂಗ್ಲಾದೇಶದಲ್ಲಿ ಹಿಂಸಾರ ದಿನ ದಿನಕ್ಕೂ ಮಿತಿ ಮೀರಿದೆ. ಎಲ್ಲೆಂದರಲ್ಲಿ ಬೆಂಕಿ, ಗಲಾಟೆ , ಹೆಣಗಳ ರಾಶಿ ಕಂಡುಬರುತ್ತಿದೆ. ಇದೀಗ ಹಿಂದೂಗಳನ್ನೆ ಟಾರ್ಗೆಟ್ ಮಾಡುತ್ತಿದ್ದು ಅವರ ಮನೆಗಳನ್ನು ದ್ವಂಸಗೊಳಿಸುವುದಲ್ಲದೆ, ಮಹಿಳೆಯರನ್ನು ಅಪಹರಿಸಿ ಹಿಂಸಿಸುತ್ತಿದ್ದಾರೆ. ಅದೂ ಅಲ್ಲದೆ ಇಸ್ಕಾಂ ಸೇರಿದಂತೆ ಹಲವು ದೇವಸ್ಥಾನಗಳನ್ನು ದ್ವಂಸಗೊಳಿಸಲಾಗಿದೆ.
ಬಾಂಗ್ಲಾದಲ್ಲಿನ ಅರಾಜಕತೆಯನ್ನು ಬಳಸಿಕೊಂಡ ಇಸ್ಲಾಮ್ ತೀವ್ರವಾದಿಗಳು ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ದಾಳಿ ನಡೆಸಿದ್ದು, 1964ರಿಂದ 2013ರವರೆಗೆ ಬಾಂಗ್ಲಾದೇಶದಿಂದ ಅಂದಾಜು 11 ಲಕ್ಷ ಹಿಂದೂಗಳು ವಲಸೆ ಹೋಗಿದ್ದಾರೆ. 1951ಕ್ಕೆ ಹೋಲಿಸಿದರೆ ಪ್ರಸ್ತುತ ಹಿಂದೂಗಳ ಜನಸಂಖ್ಯೆ ಶೇ.14ಕ್ಕೆ ಕುಸಿದಿರುವುದಾಗಿ ವರದಿ ತಿಳಿಸಿದೆ.

