ಜೈಪುರ್: ಶುಕ್ರವಾರ ತಡರಾತ್ರಿ ಎರಡು ಧಾರ್ಮಿಕ ಗುಂಪುಗಳ ನಡುವೆ ಸೂರಸಾಗರ್ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗೆ ಸಂಬಂಧಿಸಿದಂತೆ ರಾಜಸ್ಥಾನದ ಜೋಧ್‌ಪುರ ಪೊಲೀಸರು ಶನಿವಾರ ಕನಿಷ್ಠ 51 ಜನರನ್ನು ಬಂಧಿಸಿದ್ದಾರೆ.
ಈದ್ಗಾ ಸಮೀಪ ಅಂಗಡಿಗಳನ್ನು ನಿರ್ಮಾಣ ಮಾಡುತ್ತಿರುವ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ, ಕಲ್ಲುತೂರಾಟ, ಬೆಂಕಿಹಚ್ಚಿರುವ ಘಟನೆ ನಡೆದಿದೆ. ಇದು ಕಳೆದ ಎರಡು ದಿನಗಳಿಂದ ಮುಂದುವರಿದಿರುವುದಾಗಿ ವರದಿ ವಿವರಿಸಿದೆ.
ಉದ್ಗಿಗ್ನ ಶಮನಗೊಳಿಸಲು ಆರಂಭಿಕವಾಗಿ ಪೊಲೀಸರು ಮಧ್ಯಪ್ರವೇಶಿಸಿದ್ದರು. ಆದರೆ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಕಲ್ಲುತೂರಾಟ ನಡೆದಿದ್ದು, ಕೆಲವು ಅಂಗಡಿ-ಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

