ನವದೆಹಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಮಹಾರಾಷ್ಟ್ರ ಸೇರಿದಂತೆ 10 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಪೈಕಿ ಕರ್ನಾಟಕದ ಮಾಜಿ ಸಂಸದ, ಮಾಜಿ ಸಚಿವ, ಸಿ.ಎಚ್.ವಿಜಯ್ ಶಂಕರ್ ಅವರನ್ನು ಮೇಘಾಲಯಕ್ಕೆ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಶನಿವಾರ ಸಂಜೆ ಆದೇಶ ಪತ್ರ ಬಿಡುಗಡೆಯಾಗಿದೆ.
ಇದರಲ್ಲಿ ತೆಲಂಗಾಣ ಹಾಗೂ ಜಾರ್ಖಂಡ್‌ನ ಹಾಲಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರಕ್ಕೆ ನೇಮಿಸಲಾಗಿದೆ. ಹರಿಬಾವ್ ಕಿಶನ್ ಬಾವ್ ಬಾಗಡೆ ಅವರನ್ನು ರಾಜಸ್ಥಾನಕ್ಕೆ, ಸಂತೋಷ್ ಕುಮಾರ್ ಗಂಗ್ವಾರ್ ಅವರನ್ನು ಜಾರ್ಖಂಡ್‌ಗೆ ನೇಮಿಸಲಾಗಿದೆ. ರಾಮನ್ ಡೇಕಾ ಅವರನ್ನು ಛತ್ತೀಸ್‌ಗಢ ರಾಜ್ಯಪಾಲರಾಗಿ, ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ರಾಜ್ಯಪಾಲರಾಗಿ, ಓಂ ಪ್ರಕಾಶ್ ಮಾಥುರ್ ಅವರನ್ನು ಸಿಕ್ಕಿಂ ರಾಜ್ಯಪಾಲರಾಗಿ ನೇಮಿಸಲಾಗಿದೆ.

