ಅನಂತನಾಗ್: 1990ರಲ್ಲಿ ಉಗ್ರಗಾಮಿಗಳ ದಾಳಿಗೆ ತುತ್ತಾಗಿ ಹಾಳಾಗಿದ್ದ ಪುರಾತನ ಕಾಲದ ಉಮಾ ಭಗವತಿ ದೇವಸ್ಥಾನ ಬರೊಬ್ಬರಿ 34 ವರ್ಷಗಳ ಬಳಿಕ ಭಕ್ತರ ಸೇವೆಗೆ ಮತ್ತೆ ತೆರೆದುಕೊಂಡಿದೆ.

ಅನಂತನಾಗ್‌ನಲ್ಲಿರುವ ಉಮಾ ಭಗವತಿ ದೇವಾಲಯ ಹಿಂದೂಗಳ ಪಾಲಿಗೆ ಬಹಳ ವಿಶೇಷವಾದ ದೇವಸ್ಥಾನವಾಗಿದ್ದು, ಕಳೆದ 34 ವರ್ಷಗಳ ಕಾಲ ಮುಚ್ಚಲ್ಪಟ್ಟ ಈ ಪವಿತ್ರ ದೇವಾಲಯವು ಕೊನೆಗೂ ಭಕ್ತರಿಗೆ ತನ್ನ ಬಾಗಿಲುಗಳನ್ನು ತೆರೆದಿದೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಶಾಂಗಾಸ್ ಗ್ರಾಮದಲ್ಲಿ ರಾಗ್ನ್ಯಾ ದೇವಿ ದೇವಸ್ಥಾನ ಎಂದೂ ಕರೆಯಲ್ಪಡುವ ಉಮಾ ಭಗವತಿ ದೇವಸ್ಥಾನವಿದೆ. ಇದು ಪಾರ್ವತಿ ದೇವಿಯ ಅವತಾರವಾದ ಉಮಾ ದೇವಿಗೆ ಸಮರ್ಪಿತವಾದ ದೇವಸ್ಥಾನವಾಗಿದ್ದು, ಈ ದೇವಾಲಯವು 500 ವರ್ಷಗಳಿಗಿಂತಲೂ ಹಳೆಯದು ಎಂದು ಹೇಳಲಾಗುತ್ತದೆ.

ಇಂತಹ ಇತಿಹಾಸ ಪ್ರಸಿದ್ಧ ದೇಗುಲವನ್ನು ಬರೊಬ್ಬರಿ 3 ದಶಕಗಳ ನಂತರ ಈ ದೇವಾಲಯವು ಪುನರಾರಂಭಗೊಂಡಿದ್ದು, ಸ್ಥಳೀಯರು ಮತ್ತು ಭಕ್ತರಲ್ಲಿ ಅಪಾರ ಸಂತೋಷ ಮತ್ತು ಉತ್ಸಾಹವನ್ನು ತಂದಿದೆ.

The murti of Maa Uma, which was brought from Rajasthan, was placed in the sanctum sanctorum amid the chanting of religious hymns

Har Har Mahadev pic.twitter.com/ZWgQwn2QTg

— Sheetal Chopra 🇮🇳 (@SheetalPronamo) July 15, 2024