ಉತ್ತರಪ್ರದೇಶ: ವಾರಣಾಸಿಯ ಹುಕುಲ್‌ಗಂಜ್‌ನ ಲಾಲ್‌ಪುರ್ ಪ್ರದೇಶದಲ್ಲಿ ಆಘಾತಕಾರಿ ಪ್ರಕರಣವೊಂದು ಹೊರಬಿದ್ದಿದ್ದು, ತಡರಾತ್ರಿ ಬುಲೆಟ್ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಇಬ್ಬರು ಯುವತಿಯರು ಹಲ್ಲೆ ನಡೆಸಿದ್ದಾರೆ. ಕಾರಿನಲ್ಲಿದ್ದ ಯುವತಿಯರೊಂದಿಗೆ ವ್ಯಕ್ತಿ ಅನುಚಿತವಾಗಿ ವರ್ತಿಸಿದ ಎಂಬ ಆರೋಪದ ಮೇಲೆ ಯುವತಿಯರಿಬ್ಬರು ಆತನಿಗೆ ಥಳಿಸಿದ್ದಾರೆ.

ಫ್ರಂಟ್ ನ್ಯೂಸ್ ನೆಟ್‌ವರ್ಕ್‌ನ ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 30 ರ ಮಧ್ಯರಾತ್ರಿಯಲ್ಲಿ ನಡೆದಿದೆ. ಕೋಪಗೊಂಡ ಯುವತಿಯರಿಬ್ಬರು ಸುಮಾರು 1:25 ಕ್ಕೆ ತಮ್ಮ ಕಾರಿನಿಂದ ಇಳಿದು ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದ್ದಾರೆ. ಅವನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ.

— नितिन कुमार राय O+ (@18NitinKumarRai) August 31, 2024