ನ್ಯೂಯಾರ್ಕ್‌: ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ ಇಬ್ಬರು ಭಾರತೀಯರನ್ನು ಅಮೆರಿಕ ಅಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.

‘ಮ್ಯೇನ್‌ ರಾಜ್ಯದಲ್ಲಿ ಆಗಸ್ಟ್‌ 1ರಂದು ಕಾಲ್ನಡಿಗೆಯಲ್ಲಿ ಅಂತರರಾಷ್ಟ್ರೀಯ ಗಡಿ ಪ್ರವೇಶಿಸಿದ ಇಬ್ಬರು ಭಾರತೀಯ ಪ್ರಜೆಗಳನ್ನು ಹೌಲ್ಟೌನ್‌ ವಲಯದ ಗಡಿ ಕಾವಲು ಸಿಬ್ಬಂದಿ ಬಂಧಿಸಿದ್ದಾರೆ.  ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಅಮೆರಿಕ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಪಡೆ (ಸಿಬಿಪಿ) ತಿಳಿಸಿದೆ.