ಪಂಜಾಬ್‌:  ಪಂಜಾಬ್‌ನಲ್ಲಿ, ಸಿರ್ಹಿಂದ್‌ನ ಮಾಧೋಪುರ ಬಳಿ ಭಾನುವಾರ ಬೆಳಗ್ಗೆ ಎರಡು ಸರಕು ರೈಲುಗಳು ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಈ ಘಟನೆಯಲ್ಲಿ ಇಬ್ಬರು ಲೋಕೋ ಪೈಲಟ್‌ಗಳು ಗಾಯಗೊಂಡಿದ್ದು ಅವರನ್ನು ಉತ್ತರಪ್ರದೇಶದ ಸಹರಾನ್‌ಪುರದ ವಿಕಾಸ್ ಕುಮಾರ್ (37) ಮತ್ತು ಹಿಮಾಂಶು ಕುಮಾರ್ (31) ಎಂದು ಗುರುತಿಸಲಾಗಿದೆ. ಗಾಯಗೊಂಡ ಪೈಲಟ್‌ಗಳನ್ನು ಶ್ರೀ ಫತೇಘರ್ ಸಾಹಿಬ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಅರಿತ ವೈದ್ಯರು ಅವರನ್ನು ಪಟಿಯಾಲಾದ ರಾಜೀಂದ್ರ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಈ ಅವಘಡದಲ್ಲಿ ಗೂಡ್ಸ್​ ರೈಲಿನ ಇಂಜಿನ್ ಪಲ್ಟಿಯಾಗಿದ್ದು, ಪ್ಯಾಸೆಂಜರ್​ ರೈಲು ಕೂಡ ಅದರಲ್ಲಿ ಸಿಲುಕಿಕೊಂಡಿದೆ.

ಕಲ್ಲಿದ್ದಲು ತುಂಬಿದ ಎರಡು ವಾಹನಗಳು ಇಲ್ಲಿ ನಿಂತಿದ್ದವು. ಒಂದು ಗೂಡ್ಸ್ ರೈಲಿನ ಎಂಜಿನ್ ಸಡಿಲಗೊಂಡು ಇನ್ನೊಂದಕ್ಕೆ ಡಿಕ್ಕಿ ಹೊಡೆದು ನಂತರ ಎಂಜಿನ್ ಪಲ್ಟಿಯಾಗಿ ಅಂಬಾಲಾದಿಂದ ಜಮ್ಮು ತಾವಿಗೆ ಹೋಗುತ್ತಿದ್ದ ಬೇಸಿಗೆ ವಿಶೇಷ ಪ್ಯಾಸೆಂಜರ್ ರೈಲು ಸಿಲುಕಿಕೊಂಡಿತ್ತು.

ಅಂಬಾಲಾದಿಂದ ಲುಧಿಯಾನವರೆಗಿನ ಮಾರ್ಗವು ಸಂಪೂರ್ಣ ಸ್ಥಗಿತಗೊಂಡಿದೆ.