ಮುಂಬೈ: ಮುಕೇಶ್ ಅಂಬಾನಿ ಪುತ್ರನ ಮದುವೆ ಕಾರ್ಯಕ್ರಮಕ್ಕೆ ಎಂಟ್ರಿ ನೀಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮಕ್ಕೆ ಎಂಟ್ರಿಯಾಗಲು ಯತ್ನಿಸಿದ್ದ ಇಬ್ಬರನ್ನು ನಿನ್ನೆ ಬಂಧಿಸಿದ್ದಾರೆ.ಪೊಲೀಸರು ನೀಡಿರುವ ಮಾಹಿತಿ ಪ್ರಕಾರ.. ವೆಂಕಟೇಶ್ ನರಸಿಯಾ (26), ಶಫಿ ಶೇಖ್ (28) ಬಂಧಿತ ಆರೋಪಿಗಳು.
ವೆಂಕಟೇಶ್ ನರಸಿಯಾ ಯೂಟ್ಯೂಬರ್ ಆಗಿದ್ದ. ಶಫಿ ತಾನು ಬ್ಯಿಸಿನೆಸ್ ಮ್ಯಾನ್ ಅಂದ್ಕೊಂಡು ಬಂದಿದ್ದ. ಇವರ ಬಳಿ ಯಾವುದೇ ಆಮಂತ್ರಣ ಪತ್ರಿಕೆ ಇರಲಿಲ್ಲ. ಗೇಟ್ನಲ್ಲಿ ಅಧಿಕಾರಿಗಳು ವಿಚಾರಿಸಿದಾಗ ನನಗೆ ಆಮಂತ್ರಣ ಇದೆ ಎಂದಿದ್ದರು. ಆದರೆ ಅವರ ಬಳಿ ಆಹ್ವಾನ ಹೋಗಿರುವ ಯಾವುದೇ ಮಾಹಿತಿ, ಗುರುತು ಇರಲಿಲ್ಲ ಎಂದು ತಿಳಿಸಿದ್ದಾರೆ.
ಇವರ ಪ್ರಾನ್ ಏನಾಗಿತ್ತು ಅನ್ನೋದು ಮಾಹಿತಿ ದೊರಕಿಲ್ಲ. ಇವರು ಮುಂಬೈ ಹಾಗೂ ಆಂಧ್ರ ಪ್ರದೇಶದಿಂದ ಬಂದಿದ್ದರು. ಇಬ್ಬರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗಿದೆ. ಕೊನೆಗೆ ಪೊಲೀಸರು ಇಬ್ಬರನ್ನೂ ಬಿಟ್ಟು ಕಳುಹಿಸಿದ್ದಾರೆ.

