ಮುಂಬೈ: ಷೇರುಮಾರುಕಟ್ಟೆಯಲ್ಲಿ ವಂಚನೆ ಪ್ರಕರಣ ಮೇರೆಗೆ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಮಂಗಳವಾರ ಸಿಎನ್‌ಬಿಸಿ ಅವಾಝ್‌ನ ಮಾಜಿ ಮಾರ್ಕೆಟ್ ಸಂಪಾದಕ, ನಿರೂಪಕ ಪ್ರದೀಪ್ ಪಾಂಡ್ಯ ಮತ್ತು ತಾಂತ್ರಿಕ ವಿಶ್ಲೇಷಕ ಅಲ್ಪೇಶ್ ಫುರಿಯಾ ಅವರಿಗೆ ತಲಾ 1 ಕೋಟಿ ರೂ.ಗಳ ದಂಡ ವಿಧಿಸಿದೆ ಅಲ್ಲದೇ ಷೇರು ಮಾರುಕಟ್ಟೆಯಿಂದ 5 ವರ್ಷಗಳ ಕಾಲ ನಿಷೇಧಿಸಲಾಗಿದೆ.
ಅಲ್ಪೇಶ್ ಫುರಿಯಾ , ಅಲ್ಪಾ ಫುರಿಯಾ, ಮನೀಶ್ ಫುರಿಯಾ, ಮನೀಶ್ ಫುರಿಯಾ, ಮಹಾನ್ ಇನ್ವೆಸ್ಟ್‌ಮೆಂಟ್ ಮತ್ತು ತೋಶೀ ಟ್ರೇಡ್‌ಗೆ ತಲಾ 10 ಲಕ್ಷ ರೂ. ದಂಡ ವಿಧಿಸಲಾಗಿದೆ.
ವೈಯಕ್ತಿಕ ಲಾಭಕ್ಕಾಗಿ ಮಾಹಿತಿ ಮುಚ್ಚಿಟ್ಟುಕೊಂಡಿರುವುದು ಮತ್ತು ದುರುಪಯೋಗ ಪಡಿಸಿರುವುದು ತನಿಖೆ ವೇಳೆ ಕಂಡು ಬಂದಿದೆ” ಎಂದು ಸೆಬಿ ಹೇಳಿದೆ. “ಪ್ರಸ್ತುತ ಇದು ಕ್ಲಾಸಿಕಲ್ ಫ್ರಂಟ್ ರನ್ನಿಂಗ್ ಪ್ರಕರಣವನ್ನು ಹೋಲುತ್ತದೆʼʼ ಎಂದೂ ತಿಳಿಸಿದೆ.
ಸೆಬಿ ಪ್ರಕಾರ, ಅಲ್ಪೇಶ್ ಫುರಿಯಾ ಮತ್ತು ಸಂಬಂಧಿತ ಖಾತೆಗಳು 10.73 ಕೋಟಿ ರೂ.ಗಳ ಕಾನೂನುಬಾಹಿರ ಲಾಭವನ್ನು ಗಳಿಸಿವೆ ಮತ್ತು ಇದರಲ್ಲಿ 8.4 ಕೋಟಿ ರೂ.ಗಳನ್ನು ಈಗಾಗಲೇ ಸೆಬಿ ಮುಟ್ಟುಗೋಲು ಹಾಕಿಕೊಂಡಿದೆ ಮತ್ತು ಈಗ ಉಳಿದ 2.34 ಕೋಟಿ ರೂ.ಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

