ಆಂಧ್ರಪ್ರದೇಶ: ತಿರುಪತಿ ಲಡ್ಡು ಪ್ರಸಾದದ ವಿವಾದ ಸೃಷ್ಟಿಯಾಗಿದ್ದು, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಲಡ್ಡು ಬಗ್ಗೆ ಕರ್ಣ ಕಠೋರವಾಗಿ ಮಾತನಾಡಿದರು, ಅದು ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಈ ಆತಂಕ, ಆಕ್ರೋಶದ ಬೆನ್ನಲ್ಲೇ ಭಕ್ತರಿಗೆ ಟಿಟಿಡಿಯೇ ಸ್ಪಷ್ಟನೆ ಕೊಟ್ಟಿದೆ.
ಲಡ್ಡು ತಯಾರಿಕೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಟಿಟಿಡಿ ತಮ್ಮ ತಪ್ಪನ್ನು ಒಪ್ಪಿಕೊಂಡಿದೆ. ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಸಿದ್ದು ನಿಜ. ಸರ್ಕಾರಿ ಲ್ಯಾಬ್ಗಳಲ್ಲಿ ನಾವು ತುಪ್ಪದ ಪರೀಕ್ಷೆ ಮಾಡಿದ್ದೆವು. ಲ್ಯಾಬ್ ಟೆಸ್ಟ್ ಬಳಿಕ ಕಲಬೆರಕೆ ಆಗಿದ್ದು ತಿಳಿದು ಬಂದಿದೆ.
2019ರವರೆಗೆ ನಂದಿನಿ 400 ರೂಪಾಯಿಗೆ ತುಪ್ಪ ಸರಬರಾಜು ಮಾಡಿದೆ. ಅದಕ್ಕಿಂತ ಕಡಿಮೆ ಬೆಲೆಗೆ ಕೇಳಿದ್ದಕ್ಕೆ ಆಗಲ್ಲವೆಂದಿತ್ತು. ಬಳಿಕ ಬೇರೆ ಕಂಪನಿಗಳು ಕಡಿಮೆ ಬೆಲೆಗೆ ತುಪ್ಪ ಸರಬರಾಜು ಮಾಡಿದ್ದವು. ಆದ್ರೆ ಗುಣಮಟ್ಟ ಬಗ್ಗೆ ವಿವಾದವೆದ್ದು ಟೆಸ್ಟ್ ಮಾಡಿಸಿದಾಗ ತುಪ್ಪ ಸರಬರಾಜು ವೇಳೆ ಪ್ರಾಣಿ ಅಂಶ ಪತ್ತೆಯಾಗಿದೆ. 20 ಶೇಕಡಾದಷ್ಟು ಕಲಬೆರಕೆ ತುಪ್ಪ ಇರುವುದು ವರದಿಯಲ್ಲಿ ದೃಢವಾಗಿದೆ. ತುಪ್ಪ ಪೂರೈಸಿದ AR ಡೇರಿ ವಿರುದ್ಧ ಕಾನೂನು ಹೋರಾಟ ಮಾಡ್ತೀವಿ ಅಂತ ಟಿಟಿಡಿ ಇ.ಒ ಶ್ಯಾಮಲಾ ರಾವ್ ಹೇಳಿದ್ದಾರೆ.

