ಛತ್ತೀಸ್ಗಢ: ಟ್ರಕ್ ಚಾಲಕನೊಬ್ಬ ಮೊದಲು ಗುಂಡರ್‌ದೇಹಿ ಪ್ರದೇಶದಲ್ಲಿ ಒಂದು ಪುಟ್ಟ ಮಗುವಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಲು ಯತ್ನಿಸಿರುವ ಘಟನೆ ಛತ್ತೀಸ್ಗಢ ರಾಜ್ಯದ ಮೊಹ್ಲಾ-ಮಾನ್ಪುರ್-ಅಂಬಾಗಢ್ ಚೌಕಿ ಜಿಲ್ಲೆಯಲ್ಲಿ ನಡೆದಿದೆ.

ಆದರೆ ಚಾಲಕ ಪೊಲೀಸರ ಸೂಚನೆಯನ್ನು ಲೆಕ್ಕಿಸದೆ ಒಂದರ ನಂತರ ಒಂದು ಬ್ಯಾರಿಕೇಡ್‌ಗಳನ್ನು ಒಡೆದು ಮುಂದಕ್ಕೆ ದೌಡಾಯಿಸಿದ್ದಾನೆ.

ನಂತರ ಮಾನ್ಪುರ್ ಪೊಲೀಸ್ ಠಾಣೆ ಎದುರು ಮತ್ತೆ ನಾಕಾಬಂದಿ ಮಾಡಿದರೂ, ಅಲ್ಲಿಯೂ ಬ್ಯಾರಿಕೇಡ್ ಒಡೆದು ಪರಾರಿಯಾಗಲು ಯತ್ನಿಸಿದ್ದಾನೆ. ಕೊನೆಗೆ ಪೊಲೀಸರು ಬೆನ್ನಟ್ಟಿ ಟ್ರಕ್‌ನ್ನು ತಡೆದು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

View this post on Instagram

A post shared by News Karnataka (@newskarnataka)