ವಿಜಯವಾಡ: ಆಂಧ್ರಪ್ರದೇಶ, ತೆಲಂಗಾಣದಲ್ಲಿ ವರುಣನ ಆರ್ಭಟ ಮುಗಿಲು ಮುಟ್ಟಿದ್ದು, ರಣಭೀಕರ ಮಳೆಗೆ ಎರಡು ರಾಜ್ಯಗಳಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹದ ಪರಿಸ್ಥಿತಿಗೆ ಜನಜೀವನ ಅಸ್ತವ್ಯಸ್ತವಾಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿರುವ ಜನರಿಗೆ ಡ್ರೋನ್‌ಗಳಲ್ಲಿ ಆಹಾರ ಸಾಮಾಗ್ರಿಗಳನ್ನು ಪೂರೈಸಲಾಗುತ್ತಿದೆ.

200 ವರ್ಷಗಳ ರಣಭೀಕರ ಮಳೆಗೆ ಆಂಧ್ರಪ್ರದೇಶದ ಹಲವೆಡೆ ದಿಢೀರ್ ಪ್ರವಾಹ ಎದುರಾಗಿದೆ. ವಿಜಯವಾಡದಲ್ಲಿ ಟಾಟಾ ಕಾರು ಡೀಲರ್‌ ಜಾಗ ಸಂಪೂರ್ಣ ಮುಳುಗಡೆಯಾಗಿದೆ. ಮಾರಾಟಕ್ಕೂ ಮುನ್ನ ಡೀಲರ್‌ಗಳು ವಿಜಯವಾಡದಲ್ಲಿ ನೂರಾರು ಕಾರುಗಳನ್ನ ಈ ಜಾಗದಲ್ಲಿ ನಿಲ್ಲಿಸಿದ್ದರು. ಭಾರೀ ಮಳೆ ಹಾಗೂ ದಿಢೀರ್ ಪ್ರವಾಹದಿಂದಾಗಿ ಮುಳುಗಡೆಯಾಗಿದೆ.

ವಿಜಯವಾಡದಲ್ಲಿ ಟಾಟಾ ಕಾರು ಡೀಲರ್‌ಗಳನ್ನು 300ಕ್ಕೂ ಹೆಚ್ಚು ಹೊಸ ಕಾರುಗಳನ್ನು ನಿಲ್ಲಿಸಿದ್ದರು. ಭಾರೀ ಮಳೆಯಿಂದಾಗಿ ನೂರಾರು ಟಾಟಾ ಕಾರುಗಳು ಮಳೆ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿವೆ. ಮಳೆ ನೀರಿನಲ್ಲಿ ನಿಂತಲ್ಲೇ ನಿಂತಿರುವ ಟಾಟಾ ಕಂಪನಿಯ ಹೊಸ ಕಾರುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡೀಲರ್‌ಗಳ ಮೂಲಕ ಗ್ರಾಹಕರಿಗೆ ಈ ಟಾಟಾ ಕಾರುಗಳು ಮಾರಾಟವಾಗಬೇಕಾಗಿತ್ತು. ಆದರೆ ಈಗ ಮಾರಾಟಕ್ಕೂ ಮುನ್ನ ಡೀಲರ್ ಬಳಿ ಇದ್ದ ಕಾರುಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿವೆ.

https://x.com/jsuryareddy/status/1830931875734380821?