ಥಾಣೆ: ಫುಟ್ಬಾಲ್ ಮೈದಾನದ ಮೇಲ್ಛಾವಣಿಗೆ ಅಳವಡಿಸಿದ್ದ ಟಿನ್ ರೂಫ್ ಬಿದ್ದಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಪ್ರಕರಣದಲ್ಲಿ ಒಂಬತ್ತು ಮಕ್ಕಳು ಗಾಯಗೊಂಡಿದ್ದು, ಈ ಪೈಕಿ ಐವರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಭಾರೀ ಗಾಳಿ ಮಳೆಯಿಂದ ಮೇಲ್ಛಾವಣಿಗೆ ಅಳವಡಿಸಿದ್ದ ಟಿನ್ ರೂಫ್ ತುಂಡಾಗಿ ಮೈದಾನದಲ್ಲಿ ಆಡವಾಡುತ್ತಿದ್ದ ಮಕ್ಕಳ ಮೇಲೆ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡಿರುವ ಮಕ್ಕಳನ್ನು ಸಮೀಪದ ಬೆಥನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

