ಮುಂಬೈ – ಹೌರ ಮೇಲ್ ರೈಲನ್ನು ಸ್ಫೋಟಿಸುವುದಾಗಿ ಬೆದರಿಕೆ ಬಂದಿದೆ ಎಂದು ಕೇಂದ್ರ ರೈಲ್ವೆಯ ಸಿಪಿಆರ್‌ಒ ವರದಿ ಮಾಡಿದೆ. ಮುಂಬೈ-ಹೌರಾ ಮೇಲ್‌ಗೆ ಟೈಮರ್ ಬಾಂಬ್‌ನಿಂದ ರೈಲನ್ನು ಸ್ಫೋಟಿಸುವ ಬೆದರಿಕೆ ಬಂದಿತ್ತು. ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ಆಫ್ ಕಂಟ್ರೋಲ್ ಈ ಸಂದೇಶವನ್ನು ಸ್ವೀಕರಿಸಿದೆ.

ಬಾಂಬ್ ಬೆದರಿಕೆ ಹಿನ್ನಲೆ ಮಹಾರಾಷ್ಟ್ರದ ಜಲಗಾಂವ್ ನಿಲ್ದಾಣದಲ್ಲಿ ರೈಲು ಸಂಖ್ಯೆ 12809 ಅನ್ನು ನಿಲ್ಲಿಸಿ ಪರಿಶೀಲಿಸಲಾಗಿದ್ದು, ರೈಲಿನಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.