ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಬೆದರಿಕೆ ಹಾಕುವಂತಹ ಬರಹಗಳನ್ನು ಮೆಟ್ರೊ ರೈಲುಗಳಲ್ಲಿ ಬರೆಯುತ್ತಿದ್ದ ಯುವಕ ಅಂಕಿತ್‌ ಗೋಯಲ್‌ ನನ್ನು ಇಂದು ಬಂಧಿಸಿದ್ದಾರೆ. ಆತನಿಗೆ 33 ವರ್ಷ ಎಂದು ಗುರುತಿಸಲಾಗಿದೆ.

ಮೆಟ್ರೊ ರೈಲುಗಳ ಕೋಚ್‌ಗಳು ಹಾಗೂ ಸೈನ್‌ಬೋರ್ಡ್‌ಗಳಲ್ಲಿ ಗೀಚುತ್ತಿದ್ದ ಯುವಕನ ದೃಶ್ಯಗಳು ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದ್ದವು, ಅಲ್ಲದೇ ಅಂಕಿತ್‌ ತನ್ನ ಇನ್‌ಸ್ಟಾಗ್ರಾಂನಲ್ಲಿ ಗೀಚುಬರಹಗಳನ್ನು ಹಂಚಿಕೊಂಡಿದ್ದ. ನಂತರ ಆತನೇ ಗೀಚುಬರಹ ಬೆರದಿರುವುದು ಎಂದು ಶಂಕಿಸಿದ್ದ ಪೊಲೀಸರು ಇದೀಗ ಬಂಧಿಸಿದ್ದು ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.