ಕಳೆದ 6 ತಿಂಗಳಿಂದ ರೇಷನ್ ಕಾರ್ಡ್ ನಿಂದ ಪಡಿತರ ಪಡೆದುಕೊಳ್ಳದೆ ಇರುವ ಹಾಗೂ ನ್ಯಾಯ ಸಮ್ಮತವಲ್ಲದೇ ಅಕ್ರಮವಾಗಿ ಪಡೆದಿರುವ ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ಹಾಗೂ BPL ಕಾರ್ಡ್‌ಗಳನ್ನು ರದ್ದುಪಡಿಸಲು ಸರ್ಕಾರ ಮುಂದಾಗಿದೆ.
ಈಗಾಗಲೇ ಇಂತಹ ಕಾರ್ಡ್ ಗಳನ್ನು ಪತ್ತೆ ಹಚ್ಚುವ ಕಾರ್ಯ ಆರಂಭವಾಗಿದ್ದು, ಸಾವಿರಾರು ಕಾರ್ಡ್ ಗಳನ್ನ ಅಮಾನತುಗೊಳಿಸಲಾಗಿದೆ. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದ್ದು, ಈ ರೀತಿ ಅಕ್ರಮಗಳು ಕಂಡುಬಂದ ಪ್ರಕರಣದಲ್ಲಿ ಉ.ಕನ್ನಡ ಜಿಲ್ಲೆಯ 3,310 ಕಾರ್ಡ್‌ಗಳನ್ನು ಅಮಾನತುಗೊಳಿಸಿ ಆಹಾರ & ನಾಗರಿಕ ಪೂರೈಕೆ ಇಲಾಖೆ ಆದೇಶ ಹೊರಡಿಸಿದೆ.
ಈ ಬಗ್ಗೆ ರಾಷ್ಟ್ರೀಯ ಮಾಹಿತಿ ಕೇಂದ್ರದ ಮಾಹಿತಿಯನ್ನು ಆಧರಿಸಿ 2023ರ ನವೆಂಬರ್ ನಿಂದ 2024ರ ಏಪ್ರಿಲ್ ವರೆಗೆ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಬಳಸದೇ, ಪಡಿತರ ಪಡೆದುಕೊಳ್ಳದ ಕಾರ್ಡ್‌ಗಳ ಮೇಲೆ ನಿರ್ದಾಕ್ಷಣ್ಯ ಕ್ರಮವಹಿಸಲು ಇಲಾಖೆ ಸೂಚಿಸಿತ್ತು. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಇನ್ನೂ ಇಂತಹ ಕಾರ್ಡ್ ಗಳ ಹುಡುಕಾಟಕ್ಕೆ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.

