ನವದೆಹಲಿ: ಇದು ಮೋದಿಯವರ ಭಾರತ, ಬಾಂಗ್ಲಾದಂತಹ ಪರಿಸ್ಥಿತಿ ಬರೋದಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ಜೋಧ್‌ಪುರ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ನಡೆದಂತೆ ಭಾರತದಲ್ಲೂ ಮುಂದೊಂದು ದಿನ ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಜನರು ನುಗ್ಗುತ್ತಾರೆ ಎಂಬ ಮಧ್ಯಪ್ರದೇಶ ಕಾಂಗ್ರೆಸ್‌ನ ಹಿರಿಯ ನಾಯಕ ಸಜ್ಜನ್ ಸಿಂಗ್ ವರ್ಮಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ಕೆಲವರು ಕಾಮೆಂಟ್ ಮಾಡಿರುವುದು ದುರದೃಷ್ಟಕರ. ಅಂತಹ ಪರಿಸ್ಥಿತಿ ಇಲ್ಲಿ ಬರಲು ಸಾಧ್ಯವಿಲ್ಲ, ಏಕೆಂದರೆ ಇದು ಮೋದಿ ಅವರ ಭಾರತ. ಬಾಂಗ್ಲಾದೇಶದಲ್ಲಿ ನಡೆದಿರುವುದು ಅನಿರೀಕ್ಷಿತವಲ್ಲ. ಅಲ್ಲಿನ ಪರಿಸ್ಥಿಯ ಬಗ್ಗೆ ಭಾರತ ಕಣ್ಣಿಟ್ಟಿದೆ ಎಂದು ಹೇಳಿದ್ದಾರೆ.

