ಮುಂಬೈ: ಪುಣೆಯ ಅಪ್ರಾಪ್ತ ಬಾಲಕನಿಂದ ಸಂಭವಿಸಿದ ಪೋರ್ಷೆ ಕಾರು ಅಪಘಾತ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಅತಿವೇಗಾವಾಗಿ ಬಂದು ಕಾರು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದರು ಈ ಸಂಬಂಧ ಅಪ್ರಾಪ್ತನ ತಾಯಿಯನ್ನು ಕೂಡ ಬಂಧಿಸಲಾಗಿದೆ.

ಅಪ್ರಾಪ್ತ ಬಾಲಕನ ಒಂದು ಅಪಘಾತದಿಂದ ಈಗ ಇಡೀ ಕುಟುಂಬವೇ ಜೈಲುಪಾಲಾಗುವಂತೆ ಮಾಡಿದೆ. ಮಗನನ್ನು ಬಚಾವ್ ಮಾಡಲು ಹೋದ ತಂದೆ, ತಾತನನ್ನು ಬಂಧಿಸಲಾಗಿತ್ತು. ಇದೀಗ ಅಪ್ರಾಪ್ತ ಬಾಲಕ ತಾಯಿಯನ್ನು ಅರೆಸ್ಟ್ ಮಾಡಲಾಗಿದೆ.

ನಿನ್ನೆ ರಾತ್ರಿ ಅಪ್ರಾಪ್ತ ವೇದಾಂತ ಅಗರವಾಲ್ ಅವರ ತಾಯಿ ಶಿವಾನಿ ಅಗರವಾಲ್ ಅವರನ್ನು ಬಂಧಿಸಲಾಗಿದೆ. ಶಿವಾನಿ ಅವರು ಬಾಲಕನ ರಕ್ತ ಪರೀಕ್ಷೆ ವೇಳೆ ತಮ್ಮ ರಕ್ತವನ್ನು ಪರೀಕ್ಷೆೆಗೆ ನೀಡಿದ್ದರು. ಇದರಿಂದ ಮಗನ ರಕ್ತ ಪರೀಕ್ಷೆಯಿಂದ ಆಲ್ಕೋಹಾಲ್ ಸೇವನೆ ದೃಢಪಡಿಸುವುದನ್ನು ತಪ್ಪಿಸಲು ಮುಂದಾಗಿದ್ದರು.

https://x.com/ShivAroor/status/1796786245324206306