ಉತ್ತರ ಪ್ರದೇಶ: ಗೋಂಡಾ ಬಳಿ ಚಂಡೀಘಡ-ದಿಬ್ರುಘಡ ಎಕ್ಸ್​ಪ್ರೆಸ್​ ರೈಲು ಹಳಿ ತಪ್ಪಿದೆ. ಎಕ್ಸ್‌ಪ್ರೆಸ್ ರೈಲಿನ 10ಕ್ಕೂ ಹೆಚ್ಚು ಬೋಗಿಗಳು ಹಳಿ ತಪ್ಪಿ ಭೀಕರ ಅಪಘಾತ ಸಂಭವಿಸಿದೆ. ರೈಲು ಅಪಘಾತದ ದುರಂತದಲ್ಲಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ರೆ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗೋಂಡಾ ಬಳಿಯ ಜಿಲಾಹೀ ರೈಲು ನಿಲ್ದಾಣದಲ್ಲಿ ಅಪಘಾತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ರಕ್ಷಣಾ ಕಾರ್ಯಾಚರಣೆಯ ಮಧ್ಯೆ ಅಪಘಾತದ ಬಗ್ಗೆ ಲೋಕೋ ಪೈಲಟ್ ಭಯಾನಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ರೈಲು ಅಪಘಾತಕ್ಕೂ ಮುನ್ನ ಸ್ಫೋಟಗೊಂಡ ಸದ್ದು ಕೇಳಿ ಬಂತು. ಇದಾದ ಬಳಿಕ ರೈಲಿನ ಬೋಗಿಗಳು ಹಳಿ ತಪ್ಪಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಲೋಕೋ ಪೈಲಟ್ ಅವರ ಈ ಹೇಳಿಕೆ ರೈಲ್ವೆ ಅಪಘಾತದ ಬಗ್ಗೆ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ರೈಲ್ವೆ ಇಲಾಖೆ ಈ ಬಗ್ಗೆ ಉನ್ನತ ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ.

ಕಳೆದ ಜುಲೈ 16ರಂದು ಅಸ್ಸಾಂನ ದಿಬ್ರುಗಢ ಜಿಲ್ಲೆಯಲ್ಲಿ ಕಾಮರೂಪ್ ಎಕ್ಸ್‌ಪ್ರೆಸ್ ರೈಲಿನಿಂದ ಎಂಜಿನ್ ಮತ್ತು ಒಂದು ಕೋಚ್‌ ಬೇರೆ, ಬೇರೆ ಆಗಿತ್ತು. ಇದೀಗ ಉತ್ತರಪ್ರದೇಶದಲ್ಲಿ ರೈಲು ಅಪಘಾತ ಸಂಭವಿಸಿದೆ.