ಕೇರಳ: ಕೇರಳದ ವಯನಾಡಿನಲ್ಲಿ ವರುಣನ ಅಬ್ಬರ ಜೋರಾಗಿದ್ದು, ಮುತ್ತಂಗ, ಕಲ್ಲೂರಿನ ನದಿ ದಡಗಳು ಉಕ್ಕಿ ಹರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಮುಂಜಾಗೃತಾ ಕ್ರಮವಾಗಿ ಅಲ್ಲಿನ ವಾಸಿಗಳನ್ನ ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಕಳೆದ ವರ್ಷ ಚೂರಲ್ಮಲ ಜನರ ಜೀವಿನವನ್ನ ನುಚ್ಚುನೂರು ಮಾಡಿದ್ದ ಸ್ಥಳದಲ್ಲಿ ಮತ್ತೇ ವರುಣನ ಆರ್ಭಟ ಜೋರಾಗಿದ್ದು, ಚೂರಲ್ಮಲ ದ ಬೈಲಿ ಸೇತುವೆಯ ಗೇಬಿಯನ್ ಗೋಡೆ ಕೊಚ್ಚಿಹೋಗಿದೆ. ವಿಪತ್ತು ಪ್ರದೇಶದಲ್ಲಿನ ವಾಸಿಗಳನ್ನ ಬೇರೆಡೆ ಸ್ಥಳಾಂತರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

