ಹೊಸದಿಲ್ಲಿ: ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಮಕ್ಕಳಿಲ್ಲ. ಹೀಗಾಗಿ ಮಕ್ಕಳ ಅಗಲುವಿಕೆಯ ದುಃಖ ಅವರಿಗೆ ಗೊತ್ತಾಗದು ಎಂದು ಟ್ರೈನಿ ವೈದ್ಯೆಯ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವ ವೈದ್ಯರ ವಿರುದ್ಧ ಸಿಎಂ ಬೆದರಿಕೆ ಹಾಕಿರುವುದು ಸೂಕ್ತ ಕ್ರಮವಲ್ಲ ಅವರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆಂದು ಅವರು ಟೀಕಿಸಿದ್ದಾರೆ. ಇದೇ ವೇಳೆ ಟ್ರೈನಿ ವೈದ್ಯೆಯ ತಂದೆ ಮತ್ತು ಆಸ್ಪತ್ರೆಯ ಅಧಿಕಾರಿ ನಡುವಿನ ಫೋನ್‌ ಕರೆ ಗಳು ಬಹಿರಂಗವಾಗಿವೆ.

ಅದು ಬಹಿರಂಗವಾದದ್ದು ಹೇಗೆಂದು ಗೊತ್ತಿಲ್ಲ. ಈ ಕರೆಗಳ ಸೋರಿಕೆಯ ಹೊಣೆ ತಮ್ಮದಲ್ಲ ಎಂದು ಟ್ರೈನಿ ವೈದ್ಯೆಯ ತಂದೆ ಹೇಳಿಕೊಂಡಿದ್ದಾರೆ. ಸೂಕ್ಷ್ಮ ಮಾಹಿತಿ ಬಹಿರಂಗ ಮಾಡಿದ್ದು ತನಿಖೆ ಮೇಲೆ ಪರಿಣಾಮ ಬೀರಲಾರದು ಎಂದು ಟ್ರೈನಿ ತಂದೆ ಹೇಳಿದ್ದಾರೆ.