ಹೈದರಾಬಾದ್: ಸಿಗ್ನಲ್ ಜಂಪ್ ಮಾಡಿದ ಕಾರೊಂದು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು 4 ಬಾರಿ ಪಲ್ಟಿ ಹೊಡೆದ ಘಟನೆ ಹೈದಾರಾಬಾದ್‌ನ ಸಿಕಂದರಾಬಾದ್ ಕ್ಲಬ್ ಬಳಿ ನಡದಿದೆ.
ಈ ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಿಗ್ನಲ್ ಜಂಪ್ ಮಾಡಿದ ಕಪ್ಪು ಬಣ್ಣದ ಕಿಯಾ ಮುಂಭಾಗದಿಂದ ಬಂದ ಬಿಳಿ ಟೊಯೊಟಾ ಇನ್ನೋವಾ ಕಾರಿಗೆ ಡಿಕ್ಕಿಯಾಗಿ ನಾಲ್ಕು ಪಲ್ಟಿ ಹೊಡೆದಿದೆ.
ಟ್ರಾಫಿಕ್ ಪೊಲೀಸ್ ಪೇದೆ ಹಾಗೂ ಸ್ಥಳೀಯರು ಕಾರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಿ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಚಾಲಕ ಮತ್ತು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

