ಚೆನ್ನೈ: ಬಿಗ್ ಬಾಸ್ ತಮಿಳು-8 ಆರಂಭವಾಗಿದೆ. ವಿಜಯ್ ಸೇತುಪತಿ ಅವರು ಹೊಸ ಬಿಗ್ ಬಾಸ್ ಹೋಸ್ಟ್ ಆಗಿ ಕಾಣಿಸಿಕೊಂಡಿರುವ ತಮಿಳು ಬಿಗ್ ಬಾಸ್‌ನಲ್ಲಿ ಈ ಬಾರಿ ಸಾಕಷ್ಟು ಟ್ವಿಸ್ಟ್ ಗಳನ್ನು ನೀಡಲಾಗಿದೆ.ತಮಿಳು ಬಿಗ್ ಬಾಸ್ ಮನೆಗೆ 18 ಮಂದಿ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ನಟ, ನಟಿ, ನಿರ್ಮಾಪಕ, ಗಾಯಕರು ಸೇರಿದಂತೆ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳಿದ್ದಾರೆ. ದೊಡ್ಮನೆಯೊಳಗೆ ಹೋಗಿ 24 ಗಂಟೆಯಲ್ಲೇ ಓರ್ವ ಸ್ಪರ್ಧಿ ಎಲಿಮಿನೇಷನ್ ಆಗಿದ್ದು, ಪ್ರೇಕ್ಷಕರು ಶಾಕ್ ಆಗುವಂತೆ ಮಾಡಿದೆ.ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧಿಗಳಿಗೆ 24 ಗಂಟೆಯೊಳಗೆಯೇ ಎಲಿಮಿನೇಷನ್ ಶಾಕ್ ನೀಡಲಾಗಿದೆ. ಈ ಕೂಡಲೇ ಒಬ್ಬ ಸ್ಪರ್ಧಿ ಮನೆಯಿಂದ ಹೊರಗೆ ಹೋಗಲಿದ್ದಾರೆ ಎನ್ನುವ ಪ್ರೋಮೊವನ್ನು ತೋರಿಸಲಾಗಿದೆ.

