ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಸ್ಥಾಪಿಸಲಾಗಿದ್ದ ಚೆಕ್ ಪೋಸ್ಟ್‌ನಲ್ಲಿ ಸಿಆರ್‌ಪಿಎಫ್ ಪಡೆಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರನೊಬ್ಬ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಪೋರ್‌ನ ವಾಟರ್‌ಗಾಮ್ ಪ್ರದೇಶದ ಪಶುವೈದ್ಯಕೀಯ ಆಸ್ಪತ್ರೆಯ ಸಮೀಪ ಶನಿವಾರ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಘಟನೆ ನಡೆದಿದೆ.

ಸಿಆರ್‌ಪಿಎಫ್‌ನ 92ನೇ ಬೆಟಾಲಿಯನ್ ತಂಡವನ್ನು ಚೆಕ್‌ ಪೋಸ್ಟ್‌ನಲ್ಲಿ ನಿಯೋಜಿಸಲಾಗಿತ್ತು. ಈ ವೇಳೆ ಭಯೋತ್ಪಾದಕ ದಾಳಿ ನಡೆಸಿದ್ದಾನೆ. ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಪಡೆ, ಪ್ರತಿ ದಾಳಿ ನಡೆಸಿ ಉಗ್ರನನ್ನು ಹತ್ಯೆಗೈದಿದೆ ಎಂದು ಅವರು ಹೇಳಿದ್ದಾರೆ ಉಗ್ರನ ದೇಹದಿಂದ ಪಿಸ್ತೂಲ್, ಎರಡು ಗ್ರೆನೇಡ್ ಮತ್ತು ಮ್ಯಾಗಜೀನ್ ವಶಪಡಿಸಿಕೊಳ್ಳಲಾಗಿದೆ.