ಮುಂಬೈ: ಮಹಾರಾಷ್ಟ್ರದಲ್ಲಿ ವರುಣ ಅಬ್ಬರ ಮುಂದುವರಿದಿದೆ. ಮುಂಬೈ, ಕೊಲ್ಹಾಪುರ ಹಾಗೂ ಪುಣೆ ಅಕ್ಷರಶಃ ನೀರಲ್ಲಿ ನಿಂತಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್​ ಘೋಷಣೆ ಮಾಡಿದೆ.

ಇದರ ಮಧ್ಯೆ ಮುಂಬೈನಲ್ಲಿ ಹಿಂದೆಂದೂ ಸುರಿಯದಷ್ಟು ಮಳೆ ಜುಲೈ ತಿಂಗಳಲ್ಲಿ ಸುರಿದಿದ್ದು. ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ.  ಮುಂಬೈನಲ್ಲಿ ಸುಮಾರು 150 ಸೆಂಟಿ ಮೀಟರ್​ನಷ್ಟು ಮಳೆಯಾದ ಕಾರಣ ರಸ್ತೆಗಳೆಲ್ಲಾ ನೀರಲ್ಲಿ ನಿಂತಿದ್ದು. ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿವೆ. ವಿಮಾನ ಹಾಗೂ ರೇಲ್ವೆ ಸಂಚಾರಕ್ಕೂ ಕೂಡ ಮಳೆ ಅಡ್ಡಿಯಾಗಿ ನಿಂತಿದೆ.

ಮಹಾರಾಷ್ಟ್ರದ ರಾಜಧಾನಿ ಮುಂಬೈ ಪರಿಸ್ಥಿತಿ ಪುಣೆಗಿಂತಲೂ ಭೀಕರವಾಗಿದೆ. ರಸ್ತೆಗಳು ತುಂಬಿ ಹರಿಯುತ್ತಿರುವ ನದಿಯಂತೆ ಕಾಣುತ್ತಿವೆ. ಇನ್ನು ಭೀಕರವಾಗಿ ಬೀಳುತ್ತಿರುವ ಮಳೆಯಿಂದಾಗ ಹಲವು ಏರ್​ಲೈನ್ಸ್​​ನಗಳು ತಮ್ಮ ಸೇವೆಯಲ್ಲಿ ವಿಳಂಬವಾಗಲಿದೆ ಎಂದು ಘೋಷಿಸಿದರೆ. ಮತ್ತಷ್ಟು ವಿಮಾನಗಳು ತಮ್ಮ ಮಾರ್ಗವನ್ನು ಬದಲಾಯಿಸಿದರೆ ಮತ್ತೊಂದಿಷ್ಟು ವಿಮಾನ ಕಂಪನಿಗಳು ಮುಂಬೈನತ್ತ ತಮ್ಮ ಸೇವೆಯನ್ನೇ ರದ್ದುಗೊಳಿಸಿವೆ.

ಮುಂಬೈನಲ್ಲಿಯೂ ಕೂಡ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದ್ದು, ಶಾಲಾ ಕಾಲೇಜುಗಳಿಗೆ ರಜೆ ಮುಂದುವರಿದೆ, ರಸ್ತೆಗಳು ನೀರಿನಲ್ಲಿ ನಿಂತಿರುವ ಪರಿಣಾಮವಾಗಿ ಸಂಚಾರ ಅಸ್ತವ್ಯಸ್ಥವಾಗಿ ಜನರು ಪರದಾಡುತ್ತಿದ್ದಾರೆ.

ಟ್ರಾಫಿಕ್​ ಜಾಮ್​ ಕ್ಲೀಯರ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪುಣೆ ಹಾಗೂ ಮುಂಬೈ ನಗರಗಳಿಗೆ ಮುಂದಿನ 24 ಗಂಟೆಗಳ ಕಾಲ ರೆಡ್ ಅಲರ್ಟ್  ಭಾರತೀಯ ಹವಾಮಾನ ಇಲಾಖೆ ಘೋಷಣೆ ಮಾಡಿದೆ.

https://x.com/shubhamrai80/status/1816340249179742682?