ನವದೆಹಲಿ: ಕೇಂದ್ರ ಸರ್ಕಾರ ಭಾರತದಲ್ಲಿ ಟೆಲಿಗ್ರಾಮ್ ಆ್ಯಪ್ ಅನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ. ಅಸಲಿಗೆ, ದೇಶದಲ್ಲಿ ಜೂನ್ 22ರವರೆಗೆ ಭಾರತದಲ್ಲಿ ನೀಟ್ ಮರು ಪರೀಕ್ಷೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ನೀಟ್ ಪರೀಕ್ಷೆಗೆ ತೊಂದರೆ ತರುವಂತಹ ಕೃತ್ಯಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಇಂತಹ ಮಹತ್ವದ ನಿರ್ಧಾರ ಕೈಗೊಂಡಿದೆ.
ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗೆ ಟೆಲಿಗ್ರಾಮ್ ಹೆಸರುವಾಸಿಯಾಗಿದ್ದು, ಕಳೆದ ಬಾರಿ ಕೂಡ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಟೆಲಿಗ್ರಾಮ್ ಆಪ್‌ನಲ್ಲೇ ಹೆಚ್ಚು ವೈರಲ್ ಆಗಿತ್ತು.
ಹೀಗಾಗಿ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವ ಮಹತ್ವದ ಕ್ರಮವಾಗಿ, ಭಾರತ ಸರ್ಕಾರವು ಜೂನ್ 22 ರವರೆಗೆ ನೀಟ್ ಮರುಪರೀಕ್ಷೆಗೆ ಮುಂಚಿತವಾಗಿ ಟೆಲಿಗ್ರಾಮ್ ಆಪ್ ಅನ್ನು ನಿಷೇಧಿಸಿದೆ. ಜೂನ್ 30 ರವರೆಗೆ ಟೆಲಿಗ್ರಾಮ್‌ನಲ್ಲಿ ಮೆಸೇಜ್ ಕಳುಹಿಸುವ ಫೀಚರ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ.

