ಭಾರತ ಮೂಲದ NASA ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಲ್ಲಿ ಸಿಲುಕಿ ಎರಡು ತಿಂಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಮಾಹಿತಿ ಪ್ರಕಾರ, ಸುನಿತಾ ವಿಲಿಯಮ್ಸ್ ವಾಪಸಾತಿಗೆ ಇನ್ನೂ ತುಂಬಾ ಸಮಯ ಹಿಡಿಯಬಹುದು ಎಂದು ನಂಬಲಾಗಿದೆ.

ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿಗಳನ್ನು ವಾಪಸ್ ಕರೆತರಲು NASA ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಬೋಯಿಂಗ್ ನೌಕೆಯ ಸ್ಟಾರ್‌ಲೈನರ್ ಗಗನಯಾತ್ರಿಗಳು ಭೂಮಿಗೆ ಮರಳಲು ನಮ್ಮಲ್ಲಿರುವ ಎಲ್ಲಾ ಆಯ್ಕೆಗಳನ್ನೂ ಪ್ರಯೋಗ ಮಾಡಲಾಗುತ್ತಿದೆ ಎಂದು ನಾಸಾದ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಅಂದಾಜಿನ ಪ್ರಕಾರ ಗಗನಯಾತ್ರಿಗಳು 2025ರಲ್ಲಿ ಭೂಮಿಗೆ ಮರಳಬಹುದು. ನಮ್ಮ ಪ್ಲಾನ್​ನಲ್ಲಿ ಬೋಯಿಂಗ್‌ನ ಪ್ರತಿಸ್ಪರ್ಧಿ, ಎಲಾನ್ ಮಸ್ಕ್​ ಅವರ ಸ್ಪೇಸ್‌ಎಕ್ಸ್ ಕೂಡ ಕೈಜೋಡಿಸಿದೆ ಎಂದು ತಿಳಿಸಿದ್ದಾರೆ.

ಕಮರ್ಷಿಯಲ್ ಕ್ರ್ಯೂ ಕಾರ್ಯಕ್ರಮದ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ನೀಡಿರುವ ಮಾಹಿತಿ ಪ್ರಕಾರ, ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಬುಚ್ ಮತ್ತು ಸುನಿತಾ ಅವರನ್ನು ಮರಳಿ ತರುವುದು NASAದ ಪ್ರಮುಖ ಆಯ್ಕೆ ಆಗಿದೆ. ಆದರೆ ನಾಸಾ ಸ್ಪೇಸ್‌ಎಕ್ಸ್ ಕ್ರ್ಯೂ-9 ಮಿಷನ್​​ ಉಡಾವಣೆ ವಿಳಂಬ ಆಗಲಿದೆ.

ಸೆಪ್ಟೆಂಬರ್ 25ಕ್ಕೆ ಉಡವಾಣೆ ಆಗಲಿದ್ದು, ಆ ಮೂಲಕ ಇಬ್ಬರನ್ನೂ ವಾಪಸ್ ಕರೆತರಲು ಯೋಜಿಸಲಾಗಿದೆ ಎಂದಿದ್ದಾರೆ. 2025ರ ವೇಳೆಗೆ ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಭೂಮಿಗೆ ತರುವುದು ನಮ್ಮ ಗುರಿ. ನೂತನವಾಗಿ ಉಡಾವಣೆ ಮಾಡುತ್ತಿರುವ ನೌಕೆಯಲ್ಲಿ ಇಬ್ಬರು ಗಗನಯಾನಿಗಳು ಹೋಗಲಿದ್ದಾರೆ. 2025 ಫೆಬ್ರವರಿಯಲ್ಲಿ ನಾಲ್ಕು ಸಿಬ್ಬಂದಿ ವಾಪಸ್ ಆಗಲಿದ್ದಾರೆ ಎಂದಿದ್ದಾರೆ.