ರಕ್ಷಣಾ ವ್ಯವಸ್ಥೆಯಲ್ಲಿ ಭಾರತ ಮತ್ತೊಂದು ಅಸ್ತ್ರವನ್ನು ಬತ್ತಳಿಕೆಗೆ ಸೇರಿಸೊಕೊಂಡಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಆಂಧ್ರ ಪ್ರದೇಶದ ಪರೀಕ್ಷಾ ವಲಯದಲ್ಲಿ ಡ್ರೋಣ್ ಮೂಲಕ ಕ್ಷಿಪಣಿ ಲಾಂಚ್​ ಮಾಡಲಾಗಿದೆ ತಿಳಿಸಿದ್ದಾರೆ.

Precision-Guided ಕ್ಷಿಪಣಿಯನ್ನು ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಕುರ್ನೂರ್​​ನಲ್ಲಿ ಡಿಆರ್​ಡಿಓ ಅಭಿವೃದ್ಧಿಪಡಿಸಿರುವ ಯುಎಲ್​ಪಿಜಿಎಂ -ವಿ3 ಕ್ಷಿಪಣಿ ಪ್ರಯೋಗ ನಡೆಸಲಾಗಿದೆ.

ಈ ಟ್ವಿಟರ್​​ನಲ್ಲಿ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್​ಡಿಓ ಅನ್ನು ಅಭಿನಂದಿಸಿ ಶುಭಾಶಯ ಕೋರಿದ್ದಾರೆ. ಅಲ್ಲದೇ, ಇಂದು ನಡೆಸಿದ ಪರೀಕ್ಷೆಯು ಭಾರತದ ಕ್ಷಿಪಣಿಗಳ ಬಲಾಢ್ಯತೆಗೆ ಮೇಜರ್ ಬೂಸ್ಟ್​ ಸಿಕ್ಕಿದೆ ಎಂದು ಶ್ಲಾಘಿಸಿದ್ದಾರೆ.