ಚೆನ್ನೈ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಇದೀಗ ಮತ್ತೊಂದು ಮಹತ್ತರ ಹೆಜ್ಜೆಯನ್ನಿಟ್ಟಿದೆ. ರೂಮಿ 1 ಹೆಸರಿನ ತನ್ನ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ ಅನ್ನು ಇಂದು (ಆಗಸ್ಟ್ 24) ಯಶಸ್ವಿಯಾಗಿ ಉಡಾವಣೆ ಮಾಡಿದೆ.ತಮಿಳುನಾಡು ಮೂಲದ ಸ್ಟಾರ್ಟ್-ಅಪ್ ಕಂಪನಿ ಸ್ಪೇಸ್ ಝೋನ್ ಇಂಡಿಯಾವು ಮಾರ್ಟಿನ್ ಗ್ರೂಪ್ ಜತೆ ಸೇರಿ ಅಭಿವೃದ್ಧಿಪಡಿಸಿದ ಈ ರಾಕೆಟ್ನ್ನು ಚೆನ್ನೈಯ ತಿರುವಿದಂಧೈನಲ್ಲಿರುವ ಟಿಟಿಡಿಸಿ ಮೈದಾನದಿಂದ ಉಡಾವಣೆ ಮಾಡಲಾಯಿತು.
ಈ ರಾಕೆಟ್ 3 ಕ್ಯೂಬ್ ಉಪಗ್ರಹಗಳು ಮತ್ತು 50 ಪಿಐಸಿಒ ಉಪಗ್ರಹಗಳನ್ನು ಉಪಕಕ್ಷೆಯ ಪಥಕ್ಕೆ ಕೊಂಡೊಯ್ಯಲಿದೆ. ರಾಕೆಟ್ ಅನ್ನು ಮೊಬೈಲ್ ಲಾಂಚರ್ ಬಳಸಿ ಸಬ್ ಆರ್ಬಿಟಲ್ ಪಥಕ್ಕೆ ಉಡಾಯಿಸಲಾಯಿತು. ಈ ಉಪಗ್ರಹಗಳು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸಂಶೋಧನಾ ಉದ್ದೇಶಗಳಿಗಾಗಿ ಡೇಟಾವನ್ನು ಸಂಗ್ರಹಿಸಲಿವೆ.

