ಬಿಹಾರ: ಇಂದು ಬೆಳಗ್ಗೆ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದಿಂದಾಗಿ 3 ಮಹಿಳೆಯರು ಸೇರಿ ಒಟ್ಟು 7 ಜನರು ಸಾವನ್ನಪ್ಪಿದ್ದಾರೆ. 35 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಜೆಹಾನಾಬಾದ್​ನಲ್ಲಿರುವ ದೇವಸ್ಥಾನದ ಮಖ್ದುಂಪುರ ಬ್ಲಾಕ್​ನ ಬಳಿ ಇರುವ ವನವರ್​ ಬೆಟ್ಟದಲ್ಲಿ ಈ ಘಟನೆ ನಡೆದಿದೆ.

ಗಾಯಾಳುಗಳನ್ನು ಮಖ್ದುಂಪುರ ಮತ್ತು ಜೆಹಾನಾಬಾದ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರಾವಣ ಮಾಸದ 4ನೇ ಸೋಮವಾರದಂದು ದೇವಸ್ಥಾನದಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಜಲಾಭಿಷೇಕ ಮಾಡಿಸಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ.

ಕಾಲ್ತುಳಿತ ವೇಳೆ ಸಂಬಂಧಿಕರನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಈ ಘಟನೆ ಬಗ್ಗೆ ಮಾತನಾಡಿದ್ದು, ಆಡಳಿತದ ಕೊರತೆಯಿಂದ ಕಾಲ್ತುಳಿತ ಸಂಭವಿಸಿದೆ. ರಾಷ್ಟ್ರೀಯ ಕೆಡೆಟ್​​​ ಕಾರ್ಪ್ಸ್​​​​ನ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಆದರೆ ಅವರು ಭಕ್ತರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.