ಪುರಿ: ಒಡಿಶಾದಲ್ಲಿ ಬರೋಬ್ಬರಿ 46 ವರ್ಷಗಳ ಬಳಿಕ ಪುರಿ ಜಗನ್ನಾಥ ಮಂದಿರದಲ್ಲಿರುವ ರತ್ನ ಭಂಡಾರದ ಬಾಗಿಲು ಓಪನ್​ ಮಾಡಲಾಗಿದೆ. ಮಧ್ಯಾಹ್ನ 1.28ರ ಶುಭ ಮುಹೂರ್ತದಲ್ಲಿ ರತ್ನ ಭಂಡಾರದ ಒಟ್ಟು 4 ಬಾಗಿಲುಗಳನ್ನು ಓಪನ್​ ಮಾಡಿದ್ದು ಈ ಬಗ್ಗೆ ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಮಾಹಿತಿ ನೀಡಿದ್ದಾರೆ.

ಇನ್ನು ರತ್ನ ಬಾಗಿಲನ್ನು ಭಂಡಾರದ ಕೀಲಿಯಿಂದ ತೆಗೆಯಲು ಬಾರದ ಹಿನ್ನೆಲೆಯಲ್ಲಿ ಕಟ್ಟರ್‌ನಿಂದ ಬಾಗಿಲಿನ ಲಾಕ್ ಕಟ್ ಮಾಡಲಾಗಿದೆ. ನಂತರ ಬಾಗಿಲು ಒಡೆದು ರತ್ನ ಭಂಡಾರದ ಬಾಗಿಲು ಓಪನ್ ಮಾಡಲಾಗಿದೆ. ರತ್ನ ಭಂಡಾರ ಬಾಗಿಲು ತೆಗೆಯುತ್ತಿದ್ದಂತೆ ಸ್ಥಳದಲ್ಲಿದ್ದ ಎಸ್‌ಪಿ ಪಿನಾಕ್ ಮಿರ್ಶಾ ಅವರು ಮೂರ್ಛೆ ಬಿದ್ದಿದ್ದಾರೆ. ಮೂರ್ಛೆ ಬೀಳುತ್ತಿದ್ದಂತೆ ಸ್ಥಳದಲ್ಲೇ ಎಸ್‌ಪಿಗೆ ಚಿಕಿತ್ಸೆ ನೀಡಲಾಗಿದೆ. ನಂತರ ಎಸ್‌ಪಿಯನ್ನು ರಕ್ಷಣಾ ಸಿಬ್ಬಂದಿಗಳು ಹೊರಗಡೆ ಕರೆತಂದಿದ್ದಾರೆ.

11 ಜನರ ಸಮಿತಿಯಿಂದ ರತ್ನಾ ಭಂಡಾರದ ಕೋಣೆ ಓಪನ್​ ಮಾಡಲಾಗಿದೆ. ರಹಸ್ಯ ಕೋಣೆಯಲ್ಲಿರುವ ಚಿನ್ನ, ಬೆಳ್ಳಿ ಆಭರಣಗಳನ್ನ ಲೆಕ್ಕ ಹಾಕಲು ದೊಡ್ಡ, ದೊಡ್ಡ ಬಾಕ್ಸ್‌ಗಳನ್ನು ಒಳಗೆ ತೆಗೆದುಕೊಂಡು ಹೋಗಲಾಗಿದೆ.

ಭಂಡಾರದಲ್ಲಿ ಏನೆಲ್ಲ ಇದೆ,

1978ರಲ್ಲಿ ಕೊನೆ ಬಾರಿಗೆ ತೆರೆದಿತ್ತು ರತ್ನಭಂಡಾರದ ಬಾಗಿಲು
ರತ್ನ ಭಂಡಾರದಲ್ಲಿ 12,838ಕ್ಕೂ ಹೆಚ್ಚು ರತ್ನಖಚಿತ ಆಭರಣ
ಒಟ್ಟು 128.38 ಕೆ.ಜಿ ತೂಕ ಹೊಂದಿರುವ ರತ್ನಾಭರಣಗಳು
454 ಚಿನ್ನದ ವಸ್ತುಗಳಿದ್ದು, ಒಟ್ಟು 221.53 ಕೆ.ಜಿ ಭಾರ ಇದೆ
293 ಕೆ.ಜಿಯಷ್ಟು 22 ಸಾವಿರಕ್ಕೂ ಹೆಚ್ಚು ಬೆಳ್ಳಿ ವಸ್ತುಗಳಿವೆ
ವಿಶಿಷ್ಟ ಅಮೂಲ್ಯ ಹರಳುಗಳನ್ನ ಹೊಂದಿರುವ ಆಭರಣಗಳು
ಕೊಠಡಿಯಲ್ಲಿ ರಾಜರ ಕಿರೀಟಗಳು ಮತ್ತು ಸಿಂಹಾಸನಗಳು