ಆಂಧ್ರಪ್ರದೇಶ: ಸಾಫ್ಟ್ ಡ್ರಿಂಕ್ಸ್ (ತಂಪು ಪಾನೀಯ) ತುಂಬಿದ್ದ ಲಾರಿಯೊಂದು ಅಪಘಾತಕ್ಕೀಡಾದಾಗ, ಅಲ್ಲಿ ನೆರೆದಿದ್ದ ಜನತೆ ಎಂತಹ ಕೀಳು ಮಟ್ಟದ ವರ್ತನೆ ತೋರಿದ್ದಾರೆ ಎಂದರೆ ಅದನ್ನು ವಿವರಿಸಲು ಪದಗಳಿಲ್ಲ.
ಲಾರಿ ಚಾಲಕ ಮತ್ತು ಕ್ಲೀನರ್ ಸಹಾಯಕ್ಕಾಗಿ ಕಿರುಚುತ್ತಿದ್ದರೂ, ಸ್ಥಳೀಯರು ಅವರನ್ನು ರಕ್ಷಿಸುವ ಬದಲು ಲಾರಿಯಲ್ಲಿದ್ದ ಸಾಫ್ಟ್ ಡ್ರಿಂಕ್ಸ್ ಬಾಟಲಿಗಳನ್ನು ಲೂಟಿ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. “ನಾಗರಿಕ ಪ್ರಜ್ಞೆ” (Civic Sense) ಎಂಬುದು ಮರೆಯಾಗುತ್ತಿದೆಯೇ ಎಂಬ ಕಳವಳವನ್ನು ಈ ಘಟನೆ ವ್ಯಕ್ತಪಡಿಸಿದೆ.

