ದೆಹಲಿ: ಇಲ್ಲಿನ ನಿಮಾ ಆಸ್ಪತ್ರೆಯಲ್ಲಿ ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ವೈದ್ಯರೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ರೋಗಿಗಳಂತೆ ಬಂದಿದ್ದ ಇಬ್ಬರು ಕಾಲಿಗಾಗಿರುವ ಗಾಯಕ್ಕೆ ಚಿಕಿತ್ಸೆ ಪಡೆಯಲೆಂದು ಬಂದು ವೈದ್ಯ ಜಾವೇದ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆ ಕುರಿತು ಆಸ್ಪತ್ರೆ ಸಿಬ್ಬಂದಿ ಮಾತನಾಡಿ, ಇಬ್ಬರು ಯುವಕರು ಗಾಯಗೊಂಡು ಆಸ್ಪತ್ರೆಗೆ ಬಂದಿದ್ದರು, ಚಿಕಿತ್ಸೆ ಪಡೆದ ಬಳಿಕ ವೈದ್ಯರನ್ನು ಭೇಟಿಯಾಗಲೇಬೇಕು ಎಂದು ಮನವಿ ಮಾಡಿದರು, ವೈದ್ಯರ ಕ್ಯಾಬಿನ್ಗೆ ಪ್ರವೇಶಿಸಿದಾಗ ವೈದ್ಯರನ್ನು ಹತ್ಯೆ ಮಾಡಿದ್ದಾರೆ.

