ಪಾಲ್ಘಢ : ಆಟೋ ಚಾಲಕನೊಂದಿಗೆ ವಾಗ್ವಾದ ಮಾಡುತ್ತಲೇ ಶಿವಸೇನಾ(ಯುಟಿಬಿ) ನಾಯಕನ ಪುತ್ರ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಪಾಲ್ಘಢದಲ್ಲಿ ನಡೆದಿದೆ.  ಅವಿಭಜಿತ ಶಿವಸೇನೆಯ ಮಾಜಿ ಥಾಣೆ ಜಿಲ್ಲಾ ಮುಖ್ಯಸ್ಥ ರಘುನಾಥ್ ಮೋರೆ ಅವರ ಪುತ್ರ ಮಿಲಿಂದ್ ಮೋರೆ ಅವರು ತಮ್ಮ ಕುಟುಂಬದೊಂದಿಗೆ ನವಪುರದ ರೆಸಾರ್ಟ್‌ ಬಳಿ ಭಾನುವಾರ ಸಂಜೆ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತ ಜಯಂತ್ ಬಜ್ಬಲೆ ತಿಳಿಸಿದ್ದಾರೆ.

ರೆಸಾರ್ಟ್​ನಿಂದ ಹೊರಗೆ ಹೋಗುವಾಗ ಆಟೋ ಚಾಲಕನೊಂದಿದೆ ಜಗಳವಾಡಿದ್ದಾರೆ ಆ ಸಮಯದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಅಲ್ಲಿಗೆ ಬರುವಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು ಎಂದು ವೈದ್ಯರು ಹೇಳಿದ್ದಾರೆ. ಹೃದಯಾಘಾತವು ಪ್ರಾಥಮಿಕ ಕಾರಣವೆನ್ನುವ ಅಭಿಪ್ರಾಯಕ್ಕೆ ಬರಲಾಯಿತು. ಮೋರ್ ಅವರ ಸಂಬಂಧಿಕರ ದೂರಿನ ಆಧಾರದ ಮೇಲೆ, ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಸೆಕ್ಷನ್ 105 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.